ಬರಿದಾಗಿದೆ ಘಟಪ್ರಭೆಯ ಒಡಲು

The blazing fire has been extinguished.
ಬರಿದಾಗಿರುವ ಕಲಾದಗಿ-ಕಾತರಕಿ ಬ್ಯಾರೇಜ್.
Published on

ಕಲಾದಗಿ: ಸಮೀಪದ ಕಲಾದಗಿ-ಕಾತರಕಿ ಬ್ಯಾರೇಜ್ ಸಂಪೂರ್ಣವಾಗಿ ಬರಿದಾಗಿದ್ದು, ನದಿಯಲ್ಲಿ ನೀರಿಲ್ಲದಿರುವುದರಿಂದ ಪಶು ಪಕ್ಷಿಗಳು ಕುಡಿಯುವ ನೀರಿಗೆ ನಿತ್ಯ ಪರದಾಡುವಂತಾಗಿದೆ.

ವಾಡಿಕೆಗಿಂತ ದಿನದಿನಕ್ಕೂ ಹೆಚ್ಚಾಗುತ್ತಿರುವ ಬಿಸಿಲಿನ ಝಳಕ್ಕೆ ಒಂದು ಕಡೆ ಜನ-ಜಾನುವಾರುಗಳು ತತ್ತರಿಸುತ್ತಿದ್ದರೆ, ಇನ್ನೊಂದು ಕಡೆ ಕೊಳವೆಭಾವಿಯಲ್ಲಿ ಅಂತರ್ಜಲ ಸದ್ದಿಲ್ಲದೇ ಆಳಕ್ಕೆ ಸರಿಯುತ್ತಿದೆ ಎಂಬ ಆತಂಕ ರೈತರಲ್ಲಿ ಮೂಡುತ್ತಿದೆ.

ಇಷ್ಟೊತ್ತಿಗಾಗಲೆ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 2 ಸಾವಿರ ಕ್ಯುಸೆಕ್ಸ್ ನೀರು ಹರಿಸಲಾಗುತ್ತಿತ್ತು. ಆದರೆ, ನದಿ ಭಾಗವೆಲ್ಲ ಬತ್ತಿ ತಿಂಗಳಾಗುತ್ತ ಬಂದಿದ್ದರೂ ಈವರೆಗೂ ನದಿಗೆ ನೀರು ಬಿಡುವ ಬಗ್ಗೆ ಸಂಬಂಧಿಸಿದವರು ಮಾತನಾಡದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಕಾಲುವೆಯಿಂದ ನೀರು:

ಹಿಡಕಲ್ ಡ್ಯಾಂನಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಬಿಟ್ಟಿದ್ದ ನೀರಿನಿಂದಾಗಿ ಮುಧೋಳ ಭಾಗದ ಬ್ಯಾರೆಜ್‌ಗಳಲ್ಲಿ ಸ್ವಲ್ಪ ನೀರು ಇದೆ. ಆದರೆ, ಬಾಗಲಕೋಟೆ, ಬೀಳಗಿ ತಾಲೂಕಿನ ಘಟಪ್ರಭೆಯ ಭಾಗಗದಲ್ಲಿ ನೀರಿಲ್ಲದೆ ಬಹಳ ತೊಂದರೆಯಾಗುತ್ತಿದ್ದು, ಆದಷ್ಟು ಬೇಗ ನದಿಗೆ ನೀರು ಹರಿಸುವಂತೆ ಬ್ಯಾರೇಜ್ ಹಾಗೂ ನದಿ ಆಸುಪಾಸಿನ ಶಾರದಾಳ, ಉದಗಟ್ಟಿ, ಅಂಕಲಗಿ, ನಿಂಗಾಪುರ, ಕಾತರಕಿ, ಹಿರೇಸಂಶಿ, ಛಬ್ಬಿ, ಯಡಹಳಿ ಮತ್ತಿತರ ಗ್ರಾಮಗಳ ರೈತರು ಒತ್ತಾಯಿಸಿದ್ದಾರೆ.

ಕಲಾದಗಿ-ಕಾತರಕಿ ಬ್ಯಾರೇಜ್ ಸೇರಿ ಈ ಭಾಗದ ಬ್ಯಾರೇಜ್‌ಗಳು ಹಾಗೂ ಘಟಪ್ರಭಾ ನದಿ ಸಂಪೂರ್ಣ ಬತ್ತಿಹೋಗಿ ತಿಂಗಳು ಕಳೆದಿದೆ. ಇದರಿಂದ ಜನ ಜಾನುವಾರುಗಳ ಕುಡಿಯುವ ನೀರಿಗೆ ಬಹಳ ತೊಂದರೆಯಾಗಿದ್ದು, ಆದಷ್ಟು ಬೇಗ ಹಿಡಕಲ್ ಡ್ಯಾಂನಿಂದ ನದಿಗೆ ನೀರು ಬಿಡುವ ಬಗ್ಗೆ ಶಾಸಕ ಜೆ.ಟಿ.ಪಾಟೀಲರಿಗೆ ಮನವಿ ಸಲ್ಲಿಸಲಾಗಿದೆ. ಪ್ರವೀಣ ಅರಕೇರಿ,ಯುವಮುಖಂಡ ನದಿಗೆ ಹಿಡಕಲ್ ಡ್ಯಾಂನಿಂದ ನೀರು ಬಿಡುವ ಬಗ್ಗೆ ಮಾಹಿತಿ ಇಲ್ಲ. ಆದರೆ, ನೀರು ಬರುವ ಮೊದಲೇ ಕಲಾದಗಿ-ಕಾತರಕಿ ಬ್ಯಾರೇಜ್‌ನ ಎಲ್ಲ ಗೇಟ್ ದುರಸ್ತಿ ಪಡಿಸಲಾಗಿದ್ದು, ನೀರು ಸೋರಿಕೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರಕಾಶ ನಾಯಕ ಎಇಇ, ಸಣ್ಣ ನೀರಾವರಿ ಇಲಾಖೆ, ಬಾಗಲಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net