ರಾಗಿಗುಡ್ಡದ ಗಲಾಟೆ ಕಾರಣೀಕರ್ತರ ದೂರಾಲೋಚನೆ ದೊಡ್ಡದು

bjp protest
ಪ್ರತಿಭಟನಾ ಸಭೆಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿದರು. ಕೆ.ಎಸ್.ಈಶ್ವರಪ್ಪ, ಬಿ.ವೈ.ವಿಜಯೇಂದ್ರ, ಹರತಾಳ ಹಾಲಪ್ಪ, ಎಸ್.ಎನ್.ಚನ್ನಬಸಪ್ಪ, ಭಾರತಿ ಶೆಟ್ಟಿ, ಡಿ.ಎಸ್.ಅರುಣ್ ಇದ್ದರು.
Published on

ಶಿವಮೊಗ್ಗ: ರಾಗಿಗುಡ್ಡದ ಘಟನೆ ಸಣ್ಣದೆಂದು ಗೃಹ ಸಚಿವರು ಹೇಳುತ್ತಾರೆ. ಆದರೆ ಆ ಘಟನೆಗೆ ಕಾರಣರಾದವರ ದೂರಾಲೋಚನೆ ದೊಡ್ಡದಿದೆ. ಅದು ಉಗ್ರವಾದದ ಕರಿ ನೆರಳನ್ನು ಬಿಂಬಿಸುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆತಂಕ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಗುರುವಾರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಂದೂ ಮುಸ್ಲಿಂ ವಿರೋಧಿಯಲ್ಲ. ತ್ರಿಬಲ್ ತಲಾಖ್ ರದ್ದುಪಡಿಸಿ ಮುಸ್ಲಿಂ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿದ ಪಕ್ಷ ನಮ್ಮದು. ಉಚಿತ ಸೈಕಲ್ ಭಾಗ್ಯಲಕ್ಷ್ಮೀ ಮತ್ತು ಕಿಸಾನ್ ಸಮ್ಮಾನ್ ಯೋಜನೆ ಎಲ್ಲವನ್ನೂ ಮುಸ್ಲಿಂ ಬಾಂಧವರು ಪಡೆದಿದ್ದಾರೆ ಎಂದರು.
ಇಲ್ಲೆ ಬೆಳೆದು, ಇಲ್ಲಿಯ ಅನ್ನ ತಿಂದು ಹೆತ್ತ ತಾಯಿ ಮೇಲೆ ಹಲ್ಲೆ ಮಾಡುವ ಷಡ್ಯಂತ್ರ ಮಾಡುತ್ತಿದ್ದಾರೆ. ರಾಗಿಗುಡ್ಡದ ಪ್ರಕರಣ ನ್ಯಾಯಾಂಗ ತನಿಖೆ ಆಗಬೇಕು. ಯುಎಪಿಐ ಅಡಿಯಲ್ಲಿ ಕೇಸ್ ದಾಖಲಿಸಬೇಕು. ರಾಷ್ಟ್ರ ರಕ್ಷಣೆ ಪ್ರಶ್ನೆ ಬಂದಾಗ ನಾವೆಲ್ಲ ಒಂದಾಗಬೇಕು ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net