ಪ್ರಜ್ವಲ್ ಪ್ರಕರಣಕ್ಕೆ ಬಿಜೆಪಿಗರು ಸೂತ್ರದಾರರು

Krishna-byregowda
Published on

ರಾಯಚೂರು: ಸಂಸದ ಪ್ರಜ್ವಲ್ ರೇವಣ್ಣನನ್ನು ಚುನಾವಣೆಯಲ್ಲಿ ಸೋಲಿಸಲು ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿರುವುದರ ಹಿಂದೆ ಬಿಜೆಪಿ ನಾಯಕರೇ ಸೂತ್ರದಾರರಾಗಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ದೇವೇಗೌಡರ ಕುಟುಂಬವನ್ನು ಬಿಜೆಪಿ ಟಾರ್ಗೇಟ್ ಮಾಡಿದ್ದು, ಚುನಾವಣೆಗೆ ಎರಡು ದಿನ ಮೊದಲು ವಿಡಿಯೋ ರಿಲೀಸ್ ಮಾಡಿ, ಚುನಾವಣೆ ಮುಗಿದ ಮೇಲೆ ನಮಗೂ ಅದಕ್ಕೂ ಸಂಬಂಧ ಇಲ್ಲ ಅನ್ನುತ್ತಿದ್ದಾರೆ ಎಂದರು.
ವಿಡಿಯೋ ಎಲ್ಲಿಂದ ಬಂತು ಅನ್ನೋದು ಮುಖ್ಯನಾ? ಮಹಿಳೆಯರ ಮಾನಹರಣ ಆಗೋದು ಮುಖ್ಯನಾ. ಇದು ಪ್ರಪಂಚದಲ್ಲಿ ಅತ್ಯಂತ ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣವಾಗಿದ್ದು, ಒಬ್ಬ ಸಂಸದ ತನ್ನ ಪ್ರಭಾವ ಬಳಸಿ ಅಮಾಯಕ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಚುನಾವಣೆ ಸಂದರ್ಭದಲ್ಲಿ ಜನರ ಭಾವನೆಗಳ ಜತೆಗೆ ಚಲ್ಲಾಟವಾಡುತ್ತಾರೆ. ಅವರು ರಾಜಕೀಯವನ್ನು ದೇಶದ ಅಭಿವೃದ್ಧಿಗೆ ಬಳಸದೆ ಕುಟುಂಬದ ಅಭಿವೃದ್ಧಿಗಾಗಿ ಬಳಸುತ್ತಿದ್ದಾರೆ. ಕುಮಾರಸ್ವಾಮಿ ಪ್ರಜ್ವಲ್‌ಗೂ ನನಗೂ ಸಂಬಂಧವೇ ಇಲ್ಲ ಎನ್ನುವಂತೆ ಮಾತನಾಡುತ್ತಿದ್ದಾರೆ.
ಬಿಜೆಪಿ ಸರ್ಕಾರದಿಂದ ಶ್ರೀಮಂತರಿಗೆ ಮಾತ್ರ ಅನುಕೂಲವಾಗಿದೆ. ಬಡವರು, ರೈತರಿಗೆ ಉಪಯೋಗವಿಲ್ಲ. ಬಿಜೆಪಿ ಅಕಾರಕ್ಕೆ ಬಂದ ನಂತರ ದೇಶದ ಆರ್ಥಿಕ ಪ್ರಗತಿ ಕುಂಠಿತವಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net