ಕೊಟ್ಟ ಆಶ್ವಾಸನೆಯನ್ನು ಬಿಜೆಪಿ ಸರ್ಕಾರ ಈಡೇರಿಸಿದೆ

CTD 27 HAKKU PATRA-01
Published on

ಚಿತ್ರದುರ್ಗ: ಬಿಜೆಪಿ ಸರ್ಕಾರ ನೀಡಿದ ಆಶ್ವಾಸನೆಯಂತೆ ಲಂಬಾಣಿ,ಕುರುಬ,ಗೊಲ್ಲರಹಟ್ಟಿ,ತಾಂಡಾಗಳು ಹಾಗೂ ನಗರದ ಕೊಳಗೇರಿಗಳಲ್ಲಿ ವಾಸವಿದ್ದ ಕು ಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಜಿಲ್ಲಾ ಮತ್ತು ತಾಲೂಕು ಆಡಳಿತಗಳಿಂದ ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹೊಸ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.

ಪೂರ್ವಜರ ಜಾಗದಲ್ಲಿ ವಾಸವಿರುವ ತಮಗೆ ಜಾಗದ ಮೇಲಿನ ಹಕ್ಕು ತಮಗೆ ಲಭಿಸಿರಲಿಲ್ಲ. ಆದರೆ ಈಗ ಈ ಹಕ್ಕನ್ನು ಶಾಶ್ವತವಾಗಿ ತಮಗೆ ನೀಡಲಾಗಿದೆ ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನೂ ಕಲ್ಪಿಸಲಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಕಸಬಾ ಹಾಗೂ ಹಿರೇ ಗುಂಟನೂರು ಹೋಬಳಿ ವ್ಯಾಪ್ತಿಯ 20 ಹಳ್ಳಿಗಳ 1781 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕಲಬುರುಗಿಯಲ್ಲಿ ನಡೆದ ಕಾರ‌್ಯಕ್ರಮದಲ್ಲಿ ಉತ್ತರ ಕರ್ನಾಟಕದ 52 ಸಾವಿರ ಜನರಿಗೆ ಹಕ್ಕು ಪತ್ರ ವಿತರಿಸಿ ದ್ದು ಗಿನ್ನಿಸ್ ದಾಖಲೆಯಾ ಗಿದೆ. ಇದೇ ಮಾದರಿ ದಕ್ಷಿಣ ಕರ್ನಾಟಕ ಭಾಗದ ನಾನಾ ಜಿಲ್ಲೆಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ಏರ್ಪ ಡಿಸಲು ಉದ್ದೇಶಿಸಿದ್ದ ಸಮಾರಂಭ ಕೇಂದ್ರ ಸಚಿವ ಅಮಿತ್‌ಶಾ ಅವರ ಸಮಯ ನಿಗದಿಯಾಗದ ಕಾರಣ ರದ್ದಾಯಿತು. ಆದರೆ ಸಿಎಂ ಬಸ ವರಾಜ ಬೊಮ್ಮಾಯಿ ಆದೇಶದಂತೆ ಆಯಾ ಜಿಲ್ಲೆಗಳ ತಾಲೂಕು ಮಟ್ಟದಲ್ಲಿ ಹಕ್ಕು ಪತ್ರ ವಿತರಿಸಲಾಗುತ್ತಿದೆ ಎಂದರು.

ಡಿಸಿ ಜಿಆರ್‌ಜೆ ದಿವ್ಯಾಪ್ರಭು,ಎಡಿಸಿ ಟಿ.ಜವರೇಗೌಡ,ಎಸಿ ಆರ್.ಚಂದ್ರಯ್ಯ,ಭೂ ದಾಖಲೆಗಳ ಉಪನಿರ್ದೇಶಕ ರಾಮಾಂಜನೇಯ,ಸಹಾಯ ಕ ನಿರ್ದೇಶಕ ನಾರಾಯಣಸ್ವಾಮಿ,ತಹಸೀಲ್ದಾರ್ ನಾಗವೇಣಿ,ತಾಪಂ ಇಒ ಹನುಮಂತಪ್ಪ,ನಗರಸಭೆ ಆಯುಕ್ತ ಶ್ರೀನಿವಾಸ ಇತರರು ಇದ್ದರು.

ವಿವಿಧ ಸೌಲಭ್ಯ ವಿತರಣೆ

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿವಿಧ ಯೋಜನೆಗಳಡಿ ಅಂಗವಿಕಲರಿಗೆ ಮಂಜೂರಾದ ವಿವಿಧ ಸೌಲಭ್ಯ ಗಳನ್ನು ತಿಪ್ಪಾರೆಡ್ಡಿ ವಿತರಿಸಿದರು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿ 9 ಮಂದಿ ಅಂಗವಿಕಲ ನಾಲ್ವರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ, ಮೂವರಿಗೆ ಹೊಲಿಗೆ ಯಂತ್ರ ಹಾಗೂ ಇಬ್ಬರಿಗೆ ಟಾಕಿಂಗ್‌ಲ್ಯಾಪ್‌ಟಾಪ್‌ಗಳನ್ನು ಶಾಸಕರು ವಿತರಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ,ಎಂಆರ್‌ಡಬ್ಲ್ಯೂಮೈಲಾರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net