ಬೈಕ್ ಸವಾರನ ಪ್ರಾಣ ಉಳಿಸಿದ ಕಟ್ಟಡ ಕಾರ್ವಿುಕರು

bike
Published on

ಬೆಂಗಳೂರು: ಯಲಹಂಕದ ಸಿಆರ್​ಪಿಎಫ್ ಆವರಣದ ಬಳಿ ಬೈಕ್​ಗೆ ಕಾರು ಡಿಕ್ಕಿ ಹೊಡೆದು ಸವಾರನ ಹೊಟ್ಟೆಯ ಮೇಲೆ ಹರಿದಿದ್ದು, ಅಲ್ಲೇ ಸಮೀಪದಲ್ಲಿದ್ದ ಕಟ್ಟಡ ಕಾರ್ವಿುಕರು ಹಾಗೂ 108 ಆಂಬುಲೆನ್ಸ್ ವಾಹನದ ಸಕಾಲಿಕ ನೆರವಿನಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ದೊಡ್ಡಬಳ್ಳಾಪುರ ರಸ್ತೆಯ ಖಾಸಗಿ ಆಯುರ್ವೆದ ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಉತ್ತರ ಭಾರತ ಮೂಲದ ರಾಜು (22) ಗಾಯಗೊಂಡವ. ಕಾಲೇಜು ಹಾಸ್ಟೆಲ್​ನಲ್ಲಿ ವಾಸಿಸುತ್ತಿದ್ದ ರಾಜು, ಬುಧವಾರ ತಡರಾತ್ರಿ 12.30ರಲ್ಲಿ ಸಿಆರ್​ಪಿಎಫ್ ಆವರಣದ ಬಳಿ ತೆರಳುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದ ಆತನ ಹೊಟ್ಟೆಯ ಮೇಲೆ ವಾಹನ ಹರಿದಿತ್ತು. ಪರಿಣಾಮ ಹೊಟ್ಟೆಯ ಒಳಭಾಗದ ಮಾಂಸ ಹೊರಬಂದು ಗಂಭೀರವಾಗಿ ಗಾಯಗೊಂಡಿದ್ದ. ಆ ಪ್ರದೇಶದಲ್ಲಿ ಕಟ್ಟಡ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ವಿುಕರು, ಸಕಾಲಕ್ಕೆ ಆಗಮಿಸಿದ 108 ಆಂಬುಲೆನ್ಸ್​ನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದರು. ತುರ್ತಾಗಿ ವೈದ್ಯರು ಚಿಕಿತ್ಸೆ ನೀಡಿದ ಹಿನ್ನೆಲೆಯಲ್ಲಿ ರಾಜು ಬದುಕುಳಿದಿದ್ದಾನೆ.

ವಾಹನ ಮಾಲೀಕರಿಗೆ ಹುಡುಕಾಟ: ಯಲಹಂಕ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಅಪರಿಚಿತ ವಾಹನ ಮಾಲೀಕರಿಗೆ ಶೋಧಿಸುತ್ತಿದ್ದಾರೆ. ಶೀಘ್ರದಲ್ಲೇ ಆತನನ್ನು ಬಂಧಿಸುವುದಾಗಿ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net