ಬೈಕ್ ಸವಾರ ಸ್ಥಳದಲ್ಲೇ ಮೃತ

road-accident-16539197093x2
Published on

ಮೈಸೂರು: ಮೈಸೂರು ತಾಲೂಕು ಸಿದ್ದರಾಮನಹುಂಡಿ ರಸ್ತೆಯಲ್ಲಿ ಗೂಡ್ಸ್ ಆಟೋ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ತಿ.ನರಸೀಪುರ ತಾಲೂಕು ವಾಟಾಳುಪುರ ಗ್ರಾಮದ ನಿವಾಸಿ ಪ್ರಭುಸ್ವಾಮಿ(56) ಮೃತರು. ಕೆಲಸದ ನಿಮಿತ್ತ ಪಿಲ್ಲಹಳ್ಳಿಗೆ ಹೋಗಿದ್ದ ಅವರು ಬೈಕ್‌ನಲ್ಲಿ ಸಿದ್ದರಾಮನಹುಂಡಿ ರಸ್ತೆ ಮೂಲಕ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಹೊಸಹಳ್ಳಿ ಬಳಿ ಹಿಂದಿನಿಂದ ಗೂಡ್ಸ್ ಆಟೋ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟುಬಿದ್ದು ಮೃತಪಟ್ಟರು.


ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬದವರಿಗೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net