

ಮುಂಡರಗಿ: ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಮುಂಡವಾಡ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಹೂವಿನಹಡಗಲಿ ತಾಲೂಕಿನ ಮಾಗಳ ಗ್ರಾಮದ ಧನಶೆಟ್ಟಿ ಫಕೀರಪ್ಪ (70) ಮೃತ ವ್ಯಕ್ತಿ. ಮೃತವ್ಯಕ್ತಿ ಸೇರಿ ಮೂವರು ಒಂದೇ ಬೈಕ್‌ನಲ್ಲಿ ತಾಲೂಕಿನ ಬಿದರಹಳ್ಳಿ ಗ್ರಾಮದಿಂದ ಮುಂಡವಾಡ ಗ್ರಾಮದ ಕಡೆಗೆ ಹೊರಟಿದ್ದರು. ಮುಂದೆ ಸಾಗುತ್ತಿದ್ದ ಲಾರಿಯನ್ನು ಹಿಂದಿಕ್ಕುವ ಧಾವಂತದಲ್ಲಿ ಲಾರಿಯ ಬಲಭಾಗಕ್ಕೆ ಬೈಕ್ ಡಿಕ್ಕಿಯಾಗಿದೆ. ಬೈಕಿನಲ್ಲಿ ಕುಳಿತಿದ್ದ ಮೂವರು ಸವಾರರು ನೆಲಕ್ಕುರುಳಿದ್ದಾರೆ. ಧನಶೆಟ್ಟಿ ಅವರ ಮೇಲೆ ಲಾರಿ ಹರಿದು ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಉಳಿದಿಬ್ಬರಿಗೆ ಗಾಯಗಳಾಗಿವೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.