ಶಾರ್ಟ್ ಸರ್ಕ್ಯೂಟ್​ಗೆ ಬೈಕ್ ಆಹುತಿ

BIKE FIRE
Published on

ಹಿರೇಕೆರೂರ: ಬೈಕ್​ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಭಾಗಶಃ ಸುಟ್ಟು ಹಾನಿಗೀಡಾದ ಘಟನೆ ತಾಲೂಕು ಪಂಚಾಯಿತಿ ಕಚೇರಿ ಎದುರು ಶುಕ್ರವಾರ ನಡೆದಿದೆ.

ತಾಲೂಕಿನ ಚಿನ್ನಮುಳಗುಂದ ಗ್ರಾಮದ ರಾಮಚಂದ್ರ ಬಿಜಾಪುರ ಎಂಬುವವರ ಬೈಕ್ ಸುಟ್ಟುಹೋಗಿದೆ. ಕಾರ್ಯ ನಿಮಿತ್ತ ತಾಪಂ ಕಚೇರಿಗೆ ಆಗಮಿಸಿ ಬೈಕ್ ನಿಲ್ಲಿಸಿ ಒಳ ಹೋದ ವೇಳೆ ಬೈಕ್ ಬ್ಯಾಟರಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ಆದರೆ, ಅಷ್ಟೊತ್ತಿಗಾಗಲೇ ಬೈಕ್ ಭಾಗಶಃ ಸುಟ್ಟು ಹೋಗಿತ್ತು. ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕದಳದ ಠಾಣಾಧಿಕಾರಿ ಸಂಜೀವ ಭಜಂತ್ರಿ, ಸಹಾಯಕ ಠಾಣಾಧಿಕಾರಿ ಎಸ್.ಎಂ. ಕಿಲ್ಲೇದಾರ, ಸಿಬ್ಬಂದಿ ಜಯರಾಮ್ ಗೌಡ, ಉಮೇಶ ಪುತಕ್ಕಳವರ, ಗಜಾನಂದಜೀ, ಶ್ರೀಶೈಲ್ ವಕ್ಕುಂದ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net