ಕೃಷಿಕರನ್ನು ಗುರುತಿಸುವ ಕಾಯಕ ಶ್ರೇಷ್ಠ

raitharedege
raitharedege
Published on

ಕೋಟ: ಕೃಷಿ ಕ್ಷೇತ್ರದಲ್ಲಿ ಹಿರಿಯ ಕಾಯಕ ಜೀವಿಯನ್ನು ಗುರುತಿಸಿ ಗೌರವಿಸುವ ಪಂಚವರ್ಣದ ಕಾರ್ಯ ಶ್ಲಾಘನೀಯ. ಸಮಾಜದಲ್ಲಿ ನಾನಾ ಕ್ಷೇತ್ರಗಳಿವೆ ಆದರೆ ಕೃಷಿ ಕ್ಷೇತ್ರದಲ್ಲಿ ಸಾಧನೆ ವಾಡಿದವರನ್ನು ಗುರುತಿಸುವುದು ಬೆರಳೆಣಿಕೆ. ಈ ನಿಟ್ಟಿನಲ್ಲಿ ಪಂಚವರ್ಣ ಈ ನಿರಂತರ ರೈತ ಕಾಯಕ ಕಾರ್ಯಕ್ರಮ ವಿಶೇಷವಾಗಿ ಜನಮನವನ್ನು ತಲುಪಿದೆ ಎಂದು ಮಣೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್.ಎಚ್.ಕುಂದರ್ ಅಭಿಪ್ರಾಯಪಟ್ಟರು.

ಪಂಚವರ್ಣ ಯುವಕ, ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಸಹಯೋಗದಲ್ಲಿ ಮಣೂರು ಸ್ನೇಹಕೂಟ ದಶಮ ಸಂಭ್ರಮದ ಪ್ರಯುಕ್ತ ನಡೆದ ಸಾಧಕ ಕೃಷಿಕ ನಡುಬೆಟ್ಟು ಬಾಗಿ ಪೂಜಾರಿ ಇವರನ್ನು ಗೌರವಿಸಿ ಮಾತನಾಡಿದರು.

ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತೆ ಅಕ್ಷತಾ ಗಿರೀಶ್, ಸ್ನೇಹಕೂಟ ಮಣೂರಿನ ನಿರ್ದೇಶಕ ವಿಷ್ಣುಮೂರ್ತಿ ಮಯ್ಯ, ಕೋಟ ಪಂಚಾಯಿತಿ ಸದಸ್ಯ ಶಿವರಾಮ ಶೆಟ್ಟಿ, ರೈತ ಧ್ವನಿ ಸಂ ಉಪಾಧ್ಯಕ್ಷ ತಿಮ್ಮ ಕಾಂಚನ್ ಹರ್ತಟ್ಟು, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ರವೀಂದ್ರ ಕೋಟ ಪ್ರಾಸ್ತಾವಿಸಿದರು. ಕಲಾವತಿ ಅಶೋಕ್ ಸ್ವಾಗತಿಸಿ, ಅಜಿತ್ ಆಚಾರ್ ವಂದಿಸಿದರು. ವಸಂತಿ ಸನ್ಮಾನ ಪತ್ರ ವಾಚಿಸಿದರು. ಸುಜಾತ ಬಾಯರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net