ಗ್ರಾಮೀಣರಿಗೆ ಯೋಜನೆಯ ಪ್ರಯೋಜನ ಫಲಪ್ರದ

gls dharmasthala
ಗೊಳಸಂಗಿಯಲ್ಲಿ ಧರ್ಮಸ್ಥಳ ಗ್ರಾಮ ಕ್ಷೇಮಾಭಿವೃದ್ಧಿ ಯೋಜನೆಯ 3000ನೇ ಸ್ವಸಹಾಯ ಸಂಘ ಮಂಗಳವಾರ ಅಸ್ತಿತ್ವಕ್ಕೆ ತರಲಾಯಿತು. ಯೋಜನಾಧಿಕಾರಿ ಆರ್. ಪ್ರಸನ್ನ, ಮೇಲ್ವಿಚಾರಕ ಯಲ್ಲಪ್ಪ ಕೊಚ್ಚರಕಿ, ಸೇವಾ ಪ್ರತಿನಿಧಿ ಕವಿತಾ ಪಾಟೀಲ ಇದ್ದರು.
Published on

ಗೊಳಸಂಗಿ: ಗ್ರಾಮೀಣ ಭಾಗದ ಜನತೆಗೆ ನಮ್ಮ ಯೋಜನೆಯ ಪ್ರಯೋಜನ ಲಪ್ರದವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಪಿ)ಯ ತಾಲೂಕು ಯೋಜನಾಧಿಕಾರಿ ಆರ್. ಪ್ರಸನ್ನ ಹೇಳಿದರು.

ಗ್ರಾಮದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 3000ನೇ ಸ್ವ ಸಹಾಯ ಸಂಘಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಯೋಜನೆಯಡಿ ಇದುವರೆಗೂ ಎಲ್ಲ ವರ್ಗದ ಜನತೆಗೆ ಹಲವಾರು ಸಾಮಾಜಿಕ, ಶೈಕ್ಷಣಿಕ ಸೇವೆ ಒದಗಿಸಲಾಗಿದೆ. ಈ ಪೈಕಿ 154 ಜನ ಕಡು ಬಡವ ವೃದ್ಧರಿಗೆ ಮಾಸಾಶನ, 116 ಜನ ರೈತರಿಗೆ ಜಲಮಂಗಲ, ಐದು ಕೆರೆಗಳ ಹೂಳೆತ್ತುವುದು, 93 ಜನ ಪ್ರತಿಭಾವಂತ ಮಕ್ಕಳಿಗೆ ಶಿಷ್ಯವೇತನ ಮಂಜೂರು ಮಾಡಲಾಗಿದೆ ಎಂದರು.

ಮೇಲ್ವಿಚಾರಕ ಯಲ್ಲಪ್ಪ ಕೊಚ್ಚರಕಿ, ಸೇವಾ ಪ್ರತಿನಿಧಿ ಕವಿತಾ ಪಾಟೀಲ, ಸಂಘದ ಸದಸ್ಯರಾದ ವಿಜಯಲಕ್ಷ್ಮೀ ಹೂಗಾರ, ಸರಸ್ವತಿ ಹಳ್ಳೂರ, ಉಮಾ ಎಂ., ಅಂಬಕ್ಕ ಬಾಳಿಕೇರಿ, ರೇಣುಕಾ ಹೊಸಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net