ಆಚರಣೆ ಹಿಂದಿದೆ ತುಳುನಾಡಿನ ಹಿರಿಯರ ನಂಬಿಕೆ: ತುಲುವೆರೆ ಕಲ ಪದಗ್ರಹಣದಲ್ಲಿ ಅಕ್ಷತಾ ವಿ. ಹೇಳಿಕೆ

TULUVERE KALA
Published on

ಮಂಗಳೂರು: ಹಿರಿಯರ ಆಚರಣೆ, ನಂಬಿಕೆಯ ಹಿಂದೆ ಸದುದ್ದೇಶದ ಕಾರಣವಿತ್ತು. ಕಾಲ ಬದಲಾದರೂ ಅದನ್ನು ಮೂಲರೂಪದಲ್ಲೇ ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ಸುರತ್ಕಲ್ ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ವಿ. ಹೇಳಿದರು. ನಗರದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ತುಲುವೆರೆ ಕಲ ಟ್ರಸ್ಟ್‌ನ ಪದಗ್ರಹಣ ಹಾಗೂ ‘ತುಡರ್ ಪರ್ಬ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ತುಳುನಾಡಿನಲ್ಲಿ ಹಬ್ಬವೆಂದರೆ ದೀಪಾವಳಿ ಎಂದೇ ಅರ್ಥ. ಕೃಷಿ ಆಧಾರಿತ ಬದುಕಿನಲ್ಲಿ ಇದಕ್ಕೆ ಬಹುದೊಡ್ಡ ಮೌಲ್ಯವಿದೆ. ಆಚರಣೆಯಲ್ಲಿ ಪ್ರದೇಶವಾರು ವೈವಿಧ್ಯವಿದ್ದರೂ ಆಶಯ ಒಂದೇ ಆಗಿದೆ. ತುಳುನಾಡಿನ ಸೊಬಗಿಗೆ ಯಾವುದೇ ಸರ್ಕಾರಗಳು ಕಾರಣವಲ್ಲ. ಇಲ್ಲಿನ ಜನರೇ ಕಾರಣ. ಬಲಿ ಚಕ್ರವರ್ತಿಯ ಕಾಲದಿಂದಲೇ ತುಳುವರಲ್ಲಿ ದಾನಗುಣ ಮೈಗೂಡಿದೆ ಎಂದರು. ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ. ಕಾರ್ಯಕ್ರಮ ಉದ್ಘಾಟಿಸಿದರು. ತುಲುವೆರೆ ಕಲ ಟ್ರಸ್ಟ್ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಗೌರವಾಧ್ಯಕ್ಷ ಮುದ್ದು ಮೂಡುಬೆಳ್ಳೆ, ಮಾರ್ಗದರ್ಶಕರಾದ ಸದಾನಂದ ನಾರಾವಿ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ್ ಆಚಾರ್ಯ ಎಡಪದವು ಪ್ರಾರ್ಥಿಸಿದರು. ರೇಣುಕಾ ಕಣಿಯೂರು ನಿರೂಪಿಸಿದರು.

ಪದಾಧಿಕಾರಿಗಳ ನೇಮಕ

ಟ್ರಸ್ಟ್‌ನ ಗೌರವಾಧ್ಯಕ್ಷರಾಗಿ ಮುದ್ದು ಮೂಡುಬೆಳ್ಳೆ, ಅಧ್ಯಕ್ಷರಾಗಿ ಗೀತಾ ಲಕ್ಷ್ಮೀಶ್, ಉಪಾಧ್ಯಕ್ಷರಾಗಿ ಶ್ರೀಶಾವಾಸವಿ ತುಳುನಾಡ್, ಪ್ರಧಾನ ಕಾರ್ಯದರ್ಶಿ- ರಾಜೇಶ್ ಶೆಟ್ಟಿ ದೋಟ, ಜತೆ ಕಾರ್ಯದರ್ಶಿ- ರೇಣುಕಾ ಕಣಿಯೂರು, ಕೋಶಾಧಿಕಾರಿ- ಪ್ರಶಾಂತ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿ- ಎಚ್ಕೆ ನಯನಾಡು, ಜತೆ ಸಾಂಸ್ಕೃತಿಕ ಕಾರ್ಯದರ್ಶಿ- ದಿವ್ಯಶ್ರೀ ಪುತ್ತೂರು, ಸಂಘಟನಾ ಕಾರ್ಯದರ್ಶಿ- ಪದ್ಮನಾಭ ಪೂಜಾರಿ ಬಂಟ್ವಾಳ, ಜತೆ ಸಂಘಟನಾ ಕಾರ್ಯದರ್ಶಿ- ಚಂದ್ರಹಾಸ ಕುಂಬಾರ ಬಂದಾರು, ಸಾಮಾಜಿಕ ಜಾಲತಾಣ ನಿರ್ವಾಹಕರಾಗಿ ದಿವ್ಯಾ ಅಂಚನ್, ತುಲುವೆರೆ ಕಲ ಗ್ರೂಪ್ ನಿರ್ವಾಹಕರಾಗಿ ಆರ್.ಕೆ.ನಿರಂಜನ್, ಸಾಹಿತ್ಯ ಸಮಿತಿ ನಿರ್ವಾಹಕರಾಗಿ ಉಮೇಶ್ ಶಿರಿಯ, ಅಶೋಕ ಎನ್.ಕಡೇಶಿವಾಲಯ, ವಿಶ್ವನಾಥ ಕುಲಾಲ್ ಮಿತ್ತೂರು, ಶ್ಯಾಮ್‌ಪ್ರಸಾದ್ ಭಟ್ ನೇಮಕಗೊಂಡರು. ಈ ಸಂದರ್ಭ ಟ್ರಸ್ಟ್‌ನ ಮುಂಬೈ ಘಟಕವನ್ನು ಘೋಷಿಸಲಾಯಿತು.

‘ತುಡರ್’ ಕವಿಗೋಷ್ಠಿ

ಸಾಹಿತಿ, ಉಪನ್ಯಾಸಕ ರಘು ಇಡ್ಕಿದು ಅಧ್ಯಕ್ಷತೆಯಲ್ಲಿ ‘ತುಡರ್’ ಕವಿಗೋಷ್ಠಿ ನಡೆಯಿತು. ವಿಶ್ವನಾಥ ಕುಲಾಲ್ ಮಿತ್ತೂರು, ಡಾ.ಸುರೇಶ ನೆಗಳಗುಳಿ, ಉಮೇಶ್ ಶಿರಿಯ, ಪೂರ್ಣಿಮಾ ಕೋಟ್ಯಾನ್ ಮಾರ್ನಾಡ್, ಕೆ.ಶಶಿಕಲಾ ಭಾಸ್ಕರ್ ದೈಲಾ, ಪ್ರಶಾಂತ್ ಆಚಾರ್ಯ ಎಡಪದವು, ರವೀಂದ್ರ ಕುಲಾಲ್ ವರ್ಕಾಡಿ, ಅಶ್ವಿನಿ ತೆಕ್ಕುಂಜ ಕುರ್ನಾಡ್, ಶ್ಯಾಮ್‌ಪ್ರಸಾದ್ ಭಟ್, ಪದ್ಮನಾಭ ಪೂಜಾರಿ ಬಂಟ್ವಾಳ, ನಳಿನಿ ಭಾಸ್ಕರ್ ರೈ ಮಂಚಿ, ಅನುರಾಧಾ ರಾಜೀವ್ ಸುರತ್ಕಲ್, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ಸೌಮ್ಯಾ ಆರ್.ಶೆಟ್ಟಿ, ಅಶೋಕ ಎನ್.ಕಡೇಶಿವಾಲಯ, ಸತೀಶ್ ಬಿಳಿಯೂರು, ಪ್ರೇಮಾ ಆರ್.ಶೆಟ್ಟಿ, ಹಿತೇಶ್ ಕುಮಾರ್ ಎ., ಮಲ್ಲಿಕಾ ಜೆ.ರೈ ಪುತ್ತೂರು, ಆಕಾಶ್ ಗೇರುಕಟ್ಟೆ, ಗುಲಾಬಿ ಸುರೇಂದ್ರ ಸುರತ್ಕಲ್, ಸವಿತಾ ಕರ್ಕೇರ ಕಾವೂರು, ರಮ್ಯಾ ಎನ್., ಗೀತಾ ಲಕ್ಷ್ಮೀಶ್ ಕವಿತೆ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net