ನವ ಭಾರತದ ನವ ಯುಗಕ್ಕೆ ನಾಂದಿ

5 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಕ್ಫ ತಿದ್ದುಪಡಿ ಮಸೂದೆ ಅಂಗೀಕಾರವು ನವ ಭಾರತದ ನವ ಯುಗಕ್ಕೆ ನಾಂದಿ ಎಂದು ವಿಧಾನಸಭೆ ಪ್ರತಿಪ ಉಪ ನಾಯಕ ಅರವಿಂದ ಬೆಲ್ಲದ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ವಕ್ಫ ಆಸ್ತಿಗಳ ಏಕೀಕೃತ ನಿರ್ವಹಣೆಗಾಗಿ ಎನ್​ಡಿಎ ಸರ್ಕಾರ ಮಂಡಿಸಿದ್ದ ವಕ್ಫ ತಿದ್ದುಪಡಿ ಮಸೂದೆಯು ರಾಜ್ಯ ಸಭೆಯಲ್ಲಿ 128 ಮತಗಳನ್ನು ಪಡೆಯುವ ಮೂಲಕ ಅಂಗೀಕಾರಗೊಂಡಿರುವುದು ಸಂತಸದ ಸಂಗತಿ. ಇದರಿಂದ, ದಶಕಗಳಿಂದ ನಡೆಯುತ್ತಿದ್ದ ಅಕ್ರಮ ಭೂಮಿ ಒತ್ತುವರಿ ಹಾಗೂ ಭೂ ಅವ್ಯವಹಾರಗಳಿಗೆ ತೆರೆ ಬೀಳಲಿದೆ.

ಈ ಮಸೂದೆಯು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯಯುತ ಮೌಲ್ಯಗಳನ್ನು ಒಳಗೊಂಡಿದ್ದು, ಉತ್ತಮ ಆಡಳಿತ ಹಾಗೂ ನವ ಭಾರತದ ನಿರ್ಮಾಣ ದತ್ತ ಮತ್ತೊಂದು ಬಲಿಷ್ಠ ಹೆಜ್ಜೆಯಾಗಿದೆ. ನಿಜಕ್ಕೂ ಇದು ಜನಸಾಮಾನ್ಯರ ಹಕ್ಕುಗಳ ರಣೆಗೆ ದಾರಿದೀಪ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net