ಸಮಾನತೆಯ ಹರಿಕಾರ ದೇವರ ದಾಸಿಮಯ್ಯ

24 ygt 10
Published on

ಯಗಟಿಪುರ: ಗಂಡು ಹೆಣ್ಣಿನ ನಡುವಿನ ತಾರತಮ್ಯ ಸಲ್ಲದು. ಅವರೊಳಗೆ ಸುಳಿವಾತ್ಮ ಗಂಡು ಅಲ್ಲ ಹೆಣ್ಣು ಅಲ್ಲ ಎಂಬ ಅರಿವನ್ನು ಜನಮಾನಸಕ್ಕೆ ಮುಟ್ಟಿಸಿದ ವಚನಕಾರ ದೇವರ ದಾಸಿಮಯ್ಯ ಎಂದು ಗಂಗಾಧರ ಶಿವಪುರ ತಿಳಿಸಿದರು.
ಯಗಟಿ ಗ್ರಾಮದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಕುಡೂರು ತಾಲೂಕು ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶ್ರಾವಣ ಸಂಜೆ ಶರಣರ ಸಂದೇಶ ಕಾರ್ಯಕ್ರಮದಲ್ಲಿ ದೇವರ ದಾಸಿಮಯ್ಯಅವರನ್ನು ಕುರಿತು ಉಪನ್ಯಾಸ ನೀಡಿ, ದೇವರ ದಾಸಿಮಯ್ಯ ಕನ್ನಡ ಸಾಹಿತ್ಯದಲ್ಲಿ ಮೊದಲ ವಚನಕಾರರು. ಅವರು ಜನರ ಬದುಕನ್ನು ಕುರಿತು ತಮ್ಮ ವಚನಗಳಲ್ಲಿ ತಮ್ಮದೇ ಅನುಭವದ ನುಡಿಗಳನ್ನು ಹೇಳುತ್ತಾ ಭಕ್ತಿ ಎಂಬುವುದು ಡಾಂಭಿಕ ವಾಗಿರದೆ ಸತ್ಯ, ಶುದ್ಧವಾದ ಭಕ್ತಿಯಾಗಬೇಕು. ಪ್ರಕೃತಿಯ ಎಲ್ಲ ಅಂಶಗಳನ್ನು ಅನುಭವಿಸಿದ ಮನುಷ್ಯ ನಾನು ನನ್ನಿಂದಲೇ ಎಂಬ ಅಹಂ ತೋರಿಸಿ ಸ್ವಾರ್ಥದ ಬದುಕಿಗೆ ಸಾಕ್ಷಿಯಾಗುತ್ತಿದ್ದಾನೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಭಜನ ಮಂಡಳಿಯವರು ವಚನಗಾಯನ ನೆರವೇರಿಸಿದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಣ್ಣ, ಗ್ರಾಪಂ ಅಧ್ಯಕ್ಷೆ ಕಲಾ ವೆಂಕಟೇಶ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಶಿವಲಿಂಗ ಶಾಸ್ತ್ರಿ, ಜಗದೀಶ್ವರಚಾರ್, ಮನೋಹ ಪಾಷ, ಕೃಷ್ಣಮೂರ್ತಿ, ಪ್ರಕಾಶ್, ಶೇಷಣ್ಣ, ರಮೇಶ್, ಪ್ರಧಾನ ಕಾರ್ಯದರ್ಶಿ ಯಗಟಿ ಸತೀಶ್ ಮತ್ತು ಮೋಹನ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net