ರೈತನ ಮೇಲೆ ಕರಡಿ ದಾಳಿ

Oplus_16777216
Oplus_16777216
Published on

ಖಾನಾಪುರ: ಕೆಲಸ ಮುಗಿಸಿ ಹೊಲದಲ್ಲಿದ್ದ ಮನೆಗೆ ಹೋಗುತ್ತಿದ್ದ ವೇಳೆ ರಾಮನಗರದ ರೈತ ಮಾರುತಿ ಮಾಲೇಕರ್​ (50)ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದ ಟನೆ ಉತ್ತರ ಕನ್ನಡ ಜಿಲ್ಲೆಯ ರಾಮನಗರ ಸಮೀಪದ ಜಮೀನಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಗಾಯಗೊಂಡ ರೈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ನಾನೇಗಲಿಯಲ್ಲಿ ಕೆಲಸ ಮುಗಿಸಿ ಹೊಲದಲ್ಲಿದ್ದ ಮನೆಗೆ ಮಾರುತಿ ತೆರಳುತ್ತಿದ್ದಾಗ ಏಕಾಏಕಿ ಕರಡಿ ದಾಳಿ ಮಾಡಿಸಿದೆ. ಈ ವೇಳೆ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರು ಸಾಧ್ಯವಾಗಿಲ್ಲ. ಹೀಗಾಗಿ ಕೈ&ಕಾಲು, ಮುಖಕ್ಕೆ ಕರಡಿ ತೀವ್ರವಾಗಿ ಗಾಯಗೊಳಿಸಿದೆ. ಇದೇ ಪರಿಸ್ಥಿತಿಯಲ್ಲಿ ಮಾರುತಿ ನಾಲ್ಕು ಕಿಮೀ ದೂರದ ಮನೆಗೆ ನಡೆದುಕೊಂಡು ಬಂದಿದ್ದಾನೆ. ತಕ್ಷಣ ರಾಮನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net