

ಕೆರೂರ : ಬೀಳಗಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆರೂರ ಹೊಬಳಿಯ ವಿವಿಧ ಗ್ರಾಮಗಳಲ್ಲಿ ಅಭಿವದ್ಧಿ ಕಾಮಗಾರಿಗಳಿಗೆ ಶಾಸಕ ಜೆ.ಟಿ. ಪಾಟೀಲ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ಸುಮಾರ 10 ಲಕ್ಷ ರೂ. ವೆಚ್ಚದಲ್ಲಿ ಕೆರಕಲಮಟ್ಟಿ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಸಿ ಸಿ ರಸ್ತೆ ನಿರ್ಮಾಣ, 13 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣ, ಹೊಲಗೇರಿ ಗ್ರಾಮದಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಮಲ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣ, 112 ಲಕ್ಷ ರೂ. ಕೆರೂರ-ಬಟಕುರ್ಕಿ ಮುಖ್ಯ ರಸ್ತೆಯಿಂದ ಬೆಳ್ಳಿಖಿಂಡಿ ಗ್ರಾಮಕ್ಕೆ ಕೂಡುವ ರಸ್ತೆ ಸುಧಾರಣೆ, ಶಿಪರಮಟ್ಟಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಬೀರಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣ, 50 ಲಕ್ಷ ರೂ. ವೆಚ್ಚದಲ್ಲಿ ಶಿಪರಮಟ್ಟಿ ಗ್ರಾಮದಿಂದ ಕೈನಕಟ್ಟಿ ಗ್ರಾಮಕ್ಕೆ ಕೂಡುವ ಮುಖ್ಯ ರಸ್ತೆಗೆ ಚಾಲನೆ ನೀಡಲಾಯಿತು.
ಈ ಕುರಿತು ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಅಭಿವದ್ಧಿ ವಿಷಯದಲ್ಲಿ ನಮ್ಮ ಸರ್ಕಾರ ಯಾವುತ್ತೂ ಹಿಂಜರಿಯುವುದಿಲ್ಲ. ಅಭಿವೃದ್ಧಿಯೆ ನಮ ್ಮಮೂಲ ಮಂತ್ರ, ಕ್ಷೇತ್ರದ ಪ್ರತಿಯೊಂದು ಗ್ರಾಮವು ಅಭಿವೃದ್ಧಿ ಕಾಣಬೇಕು, ಗುತ್ತಿಗೆದಾರರು ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು.
ಮುಖಂಡ ಅಶೋಕ ಕೊಪ್ಪದ, ಗೀರಿಶ ನಾಡಗೌಡ, ಪ್ರವೀಣ ಚಿಕ್ಕೂರ, ತುಳಸಪ್ಪ ಕಬಾಡದ, ಶಿವಾನಂದ ಮುಳ್ಳೂರ,ಉಮೇಶ ಸುನ್ನಾಳ, ಕೀರಪ್ಪ ಹಲಗತ್ತಿ, ಮಲಕಾಜಪ್ಪ ವಾಲಿಕಾರ, ಮುರಿಗೆಪ್ಪ ಗುಡಿಸಲಮನಿ, ಸಹಾಯಕ ಅಭಿಯಂತ ಅಶೋಕ ತೋಪಲಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ, ಶ್ರೀಕಾಂತ ಕೆಲವಡಿ, ಶಾಸಕರ ಆಪ್ತ ಸಹಾಯಕ ವೆಂಕಟೇಶ ಜಂಬಗಿ ಮತ್ತಿತರರಿದ್ದರು.