

ಮೈಸೂರು: ನಗರದ ಹಾರ್ಡ್ವಿಕ್ ಶಾಲಾ ಮೈದಾನದಲ್ಲಿ ಶ್ವಾನಗಳ ಬೆಡಗು-ಬಿನ್ನಾಣ ಆಕರ್ಷಿಸಿತು. ವಿವಿಧ ತಳಿಗಳ ನಾಯಿಗಳು ಹಂಸ ನಡಿಗೆಯ ಸೊಬಗಿನ ಮೂಲಕ ಗಮನ ಸೆಳೆದವು.
ಮೈಸೂರು ರಾಯಲ್ ಕೆನೈನ್ ಕ್ಲಬ್ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ವಿವಿಧ ತಳಿಗಳ ಮುದ್ದಾದ ಶ್ವಾನಗಳ ಚಿನ್ನಾಟ ಮೇಳೈಸಿತ್ತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಶ್ವಾನಗಳು ಸಾಂಸ್ಕೃತಿಕ ನಗರಿ ಜನರಿಗೆ ಮುದ ನೀಡಿದವು.