ಬಂಜಾರಾ ಜನಾಂಗದವರು ಕಾಯಕ ನಿಷ್ಠರು

The Banjara people are kayakers.
ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದ ಸೋಮಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ತಾಲೂಕು ಆಡಳಿತ ಕಂದಾಯ ಇಲಾಖೆ ವತಿಯಿಂದ ಲಾನುಭವಿಗಳಿಗೆ ಶಾಸಕ ಜೆ.ಟಿ. ಪಾಟೀಲ ಹಕ್ಕುಪತ್ರ ವಿತರಣೆ ಮಾಡಿದರು. ತಹಸೀಲ್ದಾರ್ ವಿನೋದ ಹತ್ತಳ್ಳಿ, ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಪ್ಪ ಕಾಳಗಿ ಇದ್ದರು.
Published on

ಬೀಳಗಿ: ರಾಜ್ಯದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಗುರುತಿಸಿ ಹಕ್ಕುಪತ್ರ ನೀಡುವ ಮಾಡುತ್ತಿದ್ದಾರೆ ಶಾಸಕ ಜೆ.ಟಿ. ಪಾಟೀಲ ಹೇಳಿದರು.

ತಾಲೂಕಿನ ತೆಗ್ಗಿ ಗ್ರಾಮದ ಸೋಮಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ತಾಲೂಕು ಆಡಳಿತ ಕಂದಾಯ ವತಿಯಿಂದ ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಬಂಜಾರಾ ಸಮುದಾಯದ ಜನರು ಅಲೆಮಾರಿಯಾಗಿ ಸಂಚರಿಸುತ್ತಾ ಗುಡ್ಡಗಾಡು ಪ್ರದೇಶದಲ್ಲಿ ವಾಸಗಿದ್ದವರು. ಈ ಜನಾಂಗದ ಅಭಿವೃದ್ಧಿಗೆ ಕಾಂಗ್ರೆಸ್ ಸಾಕಷ್ಟು ಸೌಲಭ್ಯ ನೀಡಿದೆ. ಬಂಜಾರಾ ಜನಾಂಗದವರು ಕಾಯಕ ನಿಷ್ಠೆ ಮತ್ತು ಶ್ರರ್ಮಿಕರು. ಸಮಾಜದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಗ್ಯಾರಂಟಿ ಯೋಜನೆಯಲ್ಲಿ ಸೌಲಭ್ಯ ಪಡೆದುಕೊಂಡು ಸರ್ಕಾರದ ಕಾರ್ಯಕ್ರಮ ಟೀಕೆ ಮಾಡುವವರು. ಗ್ಯಾರಂಟಿ ಯೋಜನೆಯಲ್ಲಿ ಬರುವ ಸೌಲಭ್ಯ ಪಡೆಯದೆ ಇದ್ದರೆ, ಅದು ಅವರ ಸ್ವಾಭಿಮಾನ. ಸರ್ಕಾರಿ ಸೌಲಭ್ಯ ಪಡೆದು ಸರ್ಕಾರದ ವಿರುದ್ಧ ಮಾತನಾಡುವುದು ಅದು ದುರಭಿಮಾನ ಎಂದರು.

ತಹಸೀಲ್ದಾರ್ ವಿನೋದ ಹತ್ತಳ್ಳಿ ಪ್ರಸ್ತಾವಿಕವಾಗಿ ಮಾತನಾಡಿ, ಅರ್ಹ ಲಾನುಭವಿಗಳು ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ಹಕ್ಕುಪುತ್ರ ಪಡೆದವರು ಅವುಗಳನ್ನು ಸಬ್ ರಿಜಿಸ್ಟರ್ ಕಾರ್ಯಾಲಯಕ್ಕೆ ಹೋಗಿ ನೋಂದಣಿ ಮಾಡಿಸಿದ ನಂತರ ಗ್ರಾಮ ಪಂಚಾಯತಿಯಲ್ಲಿ ದಾಖಲು ಮಾಡಿಕೊಂಡು ಉತ್ತಾರ ಪಡೆಯಬೇಕು ಎಂದರು.

ನಾಗರಾಳ, ಸಿದ್ದಾಪೂರ, ತೆಗ್ಗಿ, ಶಿವಾಪೂರ ತಾಂಡಾಗಳಿಗೆ ಕಂದಾಯ ಗ್ರಾಮಗಳಲ್ಲಿ ವಾಸಿಸುವ 542 ಜನರಿಗೆ ತಮ್ಮ ಮನೆಯ ಮಾಲೀಕತ್ವದ ಹಕ್ಕುಪತ್ರ ವಿತರಣೆ ಮಾಡಲಾಯಿತು.

ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಪ್ಪ ಕಾಳಗಿ, ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸೋಮನಗೌಡ ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಾದಪ್ಪ ಮರಡಿ, ಗ್ರಾಪಂ ಅಧ್ಯಕ್ಷ ಲಕ್ಷ್ಮ್ಮಣ ಮಾದರ, ಗ್ರಾಪಂ ಸದಸ್ಯರಾದ ಸೋಮಪ್ಪ ಕೂಗಟಿ, ಕೃಷ್ಣ ದಿವಾನ, ರಾಮಪ್ಪ ಮರಡಿ, ಯಲ್ಲಪ್ಪ ಸಂಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net