ದಿ ಆಝಾದ್ ಅರ್ಬನ್ ಕೋ ಆಪ್ ಬ್ಯಾಂಕ್​ಗೆ ಅವಿರೋಧ ಆಯ್ಕೆ

h5-Azad
Published on

ಹುಬ್ಬಳ್ಳಿ: ಇಲ್ಲಿನ ಸ್ಟೇಷನ್ ರಸ್ತೆಯಲ್ಲಿರುವ ದಿ ಆಝಾದ್ ಅರ್ಬನ್ ಕೋ ಆಪ್ ಬ್ಯಾಂಕ್​ನ ಆಡಳಿತ ಮಂಡಳಿ ನಿರ್ದೇಶಕರು ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅತ್ತಾರ ಹಾಜಿ ಅಬ್ದುಲ್ ಖಾದರ್ ಹಾಜಿ ಅಲ್ಲಾಭಕ್ಷ, ಮುಜಾವರ ಅಬ್ದುಲ್ ಖಾದರ್ ಮೆಹಬೂಬ್​ಸಾಬ, ಶಿರೂರ ಮೊಹಮ್ಮದ್ ರಫಿಕ್ ಮೊಹದ್ದೀನಸಾಬ, ಸುಂಡಕೆ ಮುಸ್ತಾಕ ಅಹ್ಮದ ಇಬ್ರಾಹಿಂಸಾಬ್, ಹಿಂಡಸಗೇರಿ ಅಬ್ದುಲ್ ಹಕೀಂ ಮೊಹಮ್ಮದ್ ಗೌಸ್, ಹಿಂಡಸಗೇರಿ ನಾಜಿಮುದ್ದೀನ್ ಮೊಹಮ್ಮದ್​ಗೌಸ್, ಹೆಬ್ಬಳ್ಳಿ ಅಬ್ದುಲ್ ಖಾದರ್ ದಾದಾಭಾಯಿ (ಸಾಮಾನ್ಯ), ಕಮ್ಮಾರ ರಾಮಪ್ಪ ಬಸವಣ್ಣೆಪ್ಪ (ಎಸ್​ಸಿ), ತಲವಾರ ಉಮಾ ರಾಮಚಂದ್ರ(ಎಸ್​ಟಿ), ಪಲ್ಲಾಂ ಸುಹೇಲ ಆರಾ ವಾಜೀದ್ ಹುಸೇನ್, ಮುಲ್ಲಾ ಹಸನಬಿ ಮೊಹಮ್ಮದ್ ಅಲಿ(ಮಹಿಳಾ ಮೀಸಲು), ಚುಲಬುಲ ನಾಸೀರುದ್ದೀನ್ ಮೊಹಮ್ಮದ್ ತಾಹೀರ, ಜವಳಿ ಅಬ್ದುಲ್ ಮಜೀದ್ ಅಬ್ದುಲ್ ಖಾದರ್(ಹಿಂದುಳಿದ ಎ ಮತ್ತು ಬಿ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಎಸ್.ಎ. ಪಾಂಡುರಂಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net