ಹಣತೆ ಬಿಡುಗಡೆ ನಾಳೆ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ ಶಾಲಾ ಶಿಕ್ಷಣ ಕಾರ್ಯಕ್ರಮ ಅಡಿ ಪ್ರತಿ ಬುಧವಾರ ಆಯೋಜಿಸುವ "ಜ್ಞಾನದೀಪ' ಮಕ್ಕಳಿಗೊಂದು ಜೀವನಪಾಠ ವೆಬಿನಾರ್​ಗಳ ಕ್ರೂಢಿಕೃತ ವರದಿಯನ್ನೊಳಗೊಂಡ ಹೊತ್ತಿಗೆ ಹಣತೆ ಬಿಡುಗಡೆ ಸಮಾರಂಭವನ್ನು ಏ. 17ರಂದು ಬೆಳಗ್ಗೆ 11.30ಕ್ಕೆ ಇಲ್ಲಿನ ಇನ್​ಸ್ಟಿಟ್ಯೂಟ್​ ಆಫ್ ಇಂಜಿನಿರ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಐಐಐಟಿ ನಿರ್ದೇಶಕ ಡಾ.ಮಹದೇವ ಪ್ರಸನ್ನ, ಉಮಾ ಹಂಪಣ್ಣವರ ಅತಿಥಿಗಳಾಗಿ ಆಗಮಿಸುವರು. ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ ಸಿಇಒ ಸವಿತಾ ಸುಳಗೋಡು ಅಧ್ಯಕ್ಷತೆ ವಹಿಸುವರು.

ಪ್ರತಿ ಬುಧವಾರ ನಡೆಯುವ ವೆಬಿನಾರಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ತಮ್ಮ ಜ್ಞಾನ ವೃದ್ಧಿಸಿಕೊಂಡಿದ್ದಾರೆ. ಮಕ್ಕಳ ಜತೆಗೆ ಪಾಲಕರೂ ವೆಬಿನಾರ್​ ಆಲಿಸುತ್ತಿರುವುದು ವಿಶೇಷ. ಈ ಎಲ್ಲ ವಿಷಯಗಳನ್ನು ಸೇರಿಸಿ ಕೃತಿ ಸಿದ್ಧಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net