

ಮಡಿಕೇರಿ: ಕಳೆದ 24 ಗಂಟೆಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 17.29 ಮಿ.ಮೀ. ಮಳೆಯಾಗಿದೆ.
ಕಳೆದ ವರ್ಷ 15.78 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 151.64 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ 27.95 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ 12 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 11.93 ಮಿ.ಮೀ. ಮಳೆಯಾಗಿದೆ.
ಮೋಡ ಕವಿದ ವಾತಾವರಣ: ಮಡಿಕೇರಿ ತಾಲೂಕಿನ ವ್ಯಾಪ್ತಿಯಲ್ಲಿ ಸೋಮವಾರ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಆಗಾಗ್ಗೆ ಸುರಿಯುತ್ತಿದ್ದ ತುಂತುರು ಮಳೆಯಿಂದ ದ್ವಿಚಕ್ರ ವಾಹನ ಸವಾರರು ಪರದಾಡಿದರು. ವಿರಾಜಪೇಟೆ, ಕುಶಾಲನಗರ, ಸಿದ್ದಾಪುರ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು.
ಹೋಬಳಿವಾರು: ಮಡಿಕೇರಿ ಕಸಬಾ 16.60, ನಾಪೋಕ್ಲು 19.80, ಸಂಪಾಜೆ 41.20, ಭಾಗಮಂಡಲ 34.20, ವಿರಾಜಪೇಟೆ ಕಸಬಾ 8.40, ಹುದಿಕೇರಿ 20, ಶ್ರೀಮಂಗಲ 18.40, ಪೊನ್ನಂಪೇಟೆ 7.20, ಅಮ್ಮತ್ತಿ 5, ಬಾಳೆಲೆ 13, ಸೋಮವಾರಪೇಟೆ ಕಸಬಾ 8.60, ಶನಿವಾರಸಂತೆ 7.40, ಶಾಂತಳ್ಳಿ 35.60, ಕೊಡ್ಲಿಪೇಟೆ 12.40, ಕುಶಾಲನಗರ 2.40, ಸುಂಟಿಕೊಪ್ಪ 5.20 ಮಿ.ಮೀ. ಮಳೆಯಾಗಿದೆ.
ಗೋಣಿಕೊಪ್ಪ ವರದಿ: ದಕ್ಷಿಣ ಕೊಡಗಿನ ಭಾಗದಲ್ಲಿ ಸೋಮವಾರ ಬಿಸಿಲು, ಮಳೆ ದರ್ಶನ ನಡುವೆ ಚಳಿಯ ಅನುಭವ ಉಂಟಾಯಿತು.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಹೊತ್ತು ಕಳೆದಂತೆ ಬಿಸಿಲು, ನಂತರ ಮಳೆ ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಂಡಿತು. ತಣ್ಣನೆ ಗಾಳಿಗೆ ಚಳಿಯ ಅನುಭವ ಉಂಟಾಯಿತು. ಕಳೆದ 24 ಗಂಟೆಯಲ್ಲಿ ಭಾಗಮಂಡಲಕ್ಕೆ 2 ಇಂಚು ಮಳೆ ಬಿದ್ದಿದೆ. ಇದು ದಾಖಲಾಗಿರುವ ಹೆಚ್ಚು ಮಳೆ ಪ್ರಮಾಣವಾಗಿದೆ ಎಂದು ಗೋಣಿಕೊಪ್ಪ ಕೆವಿಕೆ ಕೃಷಿ ಹವಾಮಾನ ಘಟಕ ಮಾಹಿತಿ ನೀಡಿದೆ. ಗೋಣಿಕೊಪ್ಪ ಭಾಗಕ್ಕೆ 0.26 ಮಾಯಮುಡಿ 0.35 ಇಂಚು ಮಳೆಯಾಗಿದೆ. ಸುತ್ತಲಿನ ಗ್ರಾಮಗಳಿಗೆ ಸಾಧಾರಣ ಮಳೆಯಾಗಿದೆ.
=====