

ಮಾನ್ವಿ: ಶರಣರು ಕಾಯಕ ದಾಸೋಹಕ್ಕೆ ಆದ್ಯತೆ ನೀಡಿದ್ದರು ಎಂದು ತಹಸೀಲ್ದಾರ್ ರಾಜು ಪಿರಂಗಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ನೇಕಾರ ಸಮಾಜದ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಶರಣ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರು ಸಮಾಜದಲ್ಲಿನ ಮೇಲು ಮತ್ತು ಕೀಳು ತೊಡೆದು ಹಾಕಲು ಶ್ರಮಿಸಿದರು. ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣನವರ ನೇತೃತ್ವದಲ್ಲಿ ನಡೆದ ಚಳವಳಿಯಲ್ಲಿ ದೇವರ ದಾಸಿಮಯ್ಯನವರ ಪಾತ್ರ ದೊಡ್ಡದು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಉಪತಹಸೀಲ್ದಾರ್ ವಿನಾಯಕ್ ರಾವ್, ನೇಕಾರ ಒಕ್ಕೂಟದ ತಾಲೂಕು ಅಧ್ಯಕ್ಷ ಕೆ.ಈ.ನರಸಿಂಹ, ಹಿರಿಯ ವಕೀಲರಾದ ಗುಮ್ಮ ಬಸವರಾಜ, ವೀರೇಶ.ಡಿ, ಮಾರ್ಕಂಡಯ್ಯ, ಶಿವಕುಮಾರ ಸಾಹುಕರ್, ಶಿವಕುಮಾರ, ಗಂಗಾಧರ ಚಿಂಚೊಳ್ಳಿ, ಪ್ರೇಮ ಶಂಕರ, ಸತೀಶ, ಗುಮ್ಮ ಸೋಮಶೇಖರ, ಚನ್ನಪ್ಪ, ಸುರೇಶ, ರವಿಶಂಕರ ಪ್ರಧಾನಿ, ಬೂದೆಪ್ಪ ಚಿಂಚೊಳ್ಳಿ, ನಾಗರಾಜ ಇತರರಿದ್ದರು.