ವಯೋಲಿನ್ ನಾದಸುಧೆಗೆ ತಲೆದೂಗಿದ ಪ್ರೇಕ್ಷಕರು

18ark1
ಅರಕಲಗೂಡು ತಾಲೂಕಿನ ರುದ್ರಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಸಂಗೀತೋತ್ಸವದಲ್ಲಿ ವಿದ್ವಾನ್ ಆರ್.ಕೆ. ಶ್ರೀರಾಮ ಕುಮಾರ್ ಅವರ ವಯೋಲಿನ್ ವಾದನಕ್ಕೆ ವಿದ್ವಾನ್ ಸಿ.ಚೆಲುವರಾಜ್ ಮೃದಂಗ, ವಿದ್ವಾನ್ ಜಿ.ಎಸ್.ರಾಮನುಜನ್ ಘಟ ನುಡಿಸಿ ಸಹಕರಿಸಿದರು.
Published on

ಅರಕಲಗೂಡು: ತಾಲೂಕಿನ ರುದ್ರಪಟ್ಟಣದಲ್ಲಿ ಹಮ್ಮಿಕೊಂಡಿರುವ ನಾಲ್ಕನೇ ದಿನದ 21ನೇ ಸಂಗೀತೋತ್ಸವದಲ್ಲಿ ಶನಿವಾರ ವಿದ್ವಾನ್ ಆರ್.ಕೆ.ಶ್ರೀರಾಮಕುಮಾರ್ ವಯೋಲಿನ್ ನುಡಿಸಿ ನಾದಸುಧೆ ಹರಿಸಿದರು.

ಬೆಳಗ್ಗೆ ಕಾವೇರಿ ಪೂಜೆ ನಂತರ ರಾಮಮಂದಿರದಲ್ಲಿ ನಡೆದ ಸಂಗೀತ ಕಛೇರಿಯಲ್ಲಿ ವಿದ್ವಾನ್ ಶ್ರೀರಾಮ ಕುಮಾರ್ ಅವರು ನಿರತಂತರವಾಗಿ ಎರಡು ತಾಸು ನುಡಿಸಿದ ವಯೋಲಿನ್‌ಗೆ ವಿದ್ವಾನ್ ಸಿ.ಚೆಲುವರಾಜ್ ಮೃದಂಗ ಹಾಗೂ ವಿದ್ವಾನ್ ಜಿ.ಎಸ್. ರಾಮನುಜನ್ ಘಟ ನುಡಿಸಿ ಪ್ರೇಕ್ಷಕರ ಮನ ಗೆದ್ದರು. ಪ್ರಸಾದ್ ಮತ್ತು ನಿರಂಜನ್ ತಂಬೂರಿ ನುಡಿಸಿ ಸಹಕರಿಸಿದರು.

ತನ್ಮಯ್ ವಿ.ಸುಪ್ರಮೋದ ಹಾಗೂ ವಿಸ್ಮಯ್ ವಿ.ಸುಪ್ರಮೋದ ಅವರು ನುಡಿಸಿದ ಯುಗಳ ಗಾಯನಕ್ಕೆ ಸಂಗೀತ ಪ್ರಿಯರು ತಲೆದೂಗಿದರು. ಹೃಶಿತಾ ಕೇದಗೆ ವಯೋಲಿನ್ ನುಡಿಸಿದರೆ ಜಿ.ಲೋಕಪ್ರಿಯ ಮೃದಂಗ ನುಡಿಸಿ ಜನಮನ ಸೂರೆಗೊಂಡರು.

ಡಾ. ಶತಾವಧಾನಿ ಆರ್.ಗಣೇಶ್ ಸಂಗೀತ ಪ್ರಪಂಚದ ರಸನಿಮಿಷಗಳು ಕುರಿತು ಪ್ರವಚನ ನೀಡಿದರು. ಹಾಸನ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಭಾಗಗಗಳಿಂದ ಅಪಾರ ಸಂಗೀತಾಭಿಮಾನಿಗಳು ಆಗಮಿಸಿ ಕಲಾವಿದರನ್ನು ಹುರಿದುಂಬಿಸಿದರು.

ವಿದ್ವಾನ್ ಆರ್.ಕೆ.ಪದ್ಮನಾಭ ಅವರು ಕಾರ್ಯಕ್ರಮಕ್ಕೆ ಸಹಕರಿಸಿದ ಶಿವಪ್ರಸಾದ್, ಜಿ.ಎಚ್.ಬಾಲಸುಬ್ರಹ್ಮಣ್ಯ, ಕುಮಾರ್, ಡಾ. ರವಿಶಂಕರ್, ನಿರೂಪಕಿ ರಮಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net