ಗಮನ ಬೇರೆಡೆ ಸೆಳೆದು ಚಿಣ್ನಾಭರಣ ಕಳವು

crime
Published on

ಮೈಸೂರು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಗಮನವನ್ನು ಬೇರೆಡೆಗೆ ಸೆಳೆದ ವಂಚಕಿಯೊಬ್ಬಳು ಆಕೆಯ ಬ್ಯಾಗ್‌ನಲ್ಲಿದ್ದ 1.8 ಲಕ್ಷ ರೂ. ವೌಲ್ಯದ 41 ಗ್ರಾಂ ತೂಕದ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದಾಳೆ. ಪಿರಿಯಾಪಟ್ಟಣ ತಾಲೂಕಿನ ನರಳಾಪುರ ಗ್ರಾಮದ ದೇವೀರಮ್ಮ ಚಿನ್ನಾಭರಣ ಕಳೆದುಕೊಂಡವರು.

ದೇವೀರಮ್ಮ ಅವರು ಮಗಳು ಸಿಂಚನಾ ಜತೆ ತಮ್ಮ ತಾಯಿಯ ಮನೆಗೆ ತೆರಳಲು ಪಿರಿಯಾಪಟ್ಟಣದಿಂದ ಮೈಸೂರು ಕಡೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು. ಈ ವೇಳೆ ಪಕ್ಕದಲ್ಲಿ ನಿಂತಿದ್ದ ಮಹಿಳೆಯು ಚಿಲ್ಲರೆ ಹಣವನ್ನು ಬೀಳಿಸಿದ್ದಾರೆ. ನಂತರ ಸಿಂಚನಾಳಿಗೆ ಹಣವನ್ನು ತೆಗೆದುಕೊಡುವಂತೆ ತಿಳಿಸಿದ್ದಾಳೆ.

ಸಿಂಚನಾ ಹಣವನ್ನು ಹುಡುಕುವ ಸಲುವಾಗಿ ಕೆಳಗೆ ಬಗ್ಗಿದ ವೇಳೆ ಆಕೆಯ ಗಮನಕ್ಕೆ ಬಾರದಂತೆ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ, ಪರ್ಸ್ ಅನ್ನು ಮಹಿಳೆ ಎಗರಿಸಿದ್ದಾಳೆ. ಬಸ್‌ನಿಂದ ಇಳಿದ ವೇಳೆ ದೇವೀರಮ್ಮ ಹಾಗೂ ಸಿಂಚನಾಳಿಗೆ ಆಭರಣಗಳು ಕಳುವಾಗಿರುವುದು ಗೊತ್ತಾಗಿದೆ. ಈ ಸಂಬಂಧ ದೇವಿರಮ್ಮ ನೀಡಿದ ದೂರಿನ ಮೇರೆಗೆ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net