ಗಮನ ಸೆಳೆದ ಖಾಲಿ ಗಾಡಾ ಸ್ಪರ್ಧೆ

19 vikram 9
Published on

ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದಲ್ಲಿ ಶ್ರೀ ಸಾಯಿ ವಿದ್ಯಾಮಂದಿರದ ನೇತೃತ್ವ ಮತ್ತು ಶ್ರೀ ಶಿವಶಕ್ತಿ ಹವ್ಯಾಸಿ ಯುವಕ ಮಂಡಳ, ಶ್ರೀ ಗಜಾನನ ಯುವಕ ಮಂಡಳ ಮತ್ತು ಶ್ರೀ ಸಿದ್ಧಾರೂಢ ಯುವಕ ಮಂಡಳ ಸಹಯೋಗದಲ್ಲಿ ರೈತ ದಿನಾಚರಣೆ ಪ್ರಯುಕ್ತ ರಾಜ್ಯ ಮಟ್ಟದ ಎತ್ತುಗಳ ಖಾಲಿ ಗಾಡಾ ಓಡಿಸುವ ಸ್ಪರ್ಧೆಯನ್ನು ಮಂಗಳವಾರ ಆಯೋಜಿಸಲಾಗಿತ್ತು.
ರೈತರು ಅತೀ ಉತ್ಸಾಹದಿಂದ ತಮ್ಮ ಎತ್ತುಗಳ ಜತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದರು. ಆಕರ್ಷಕ ಎತ್ತುಗಳ ಖಾಲಿ ಗಾಡಾ ಓಡಿಸುವ ಸ್ಪರ್ಧೆ ವೀಕ್ಷಿಸಿದ ಜನರು, ಸಿಳ್ಳೆ, ಚಪ್ಪಾಳೆಗಳ ಮೂಲಕ ಪ್ರೋತ್ಸಾಹಿಸಿದರು.
ಸ್ಪರ್ಧೆಗೆ ನರೇಂದ್ರ ಮಳೆಪ್ಪಜ್ಜನ ಮಠದ ಶ್ರೀ ಸಂಗಮೇಶ ಸ್ವಾಮೀಜಿ ಚಾಲನೆ ನೀಡಿದರು. ಶ್ರೀ ಸಾಯಿ ವಿದ್ಯಾಮಂದಿರ ಅಧ್ಯಕ್ಷ ಈಶ್ವರ ಗಾಣಿಗೇರ, ಜಿಪಂ ಮಾಜಿ ಸದಸ್ಯ ತವನಪ್ಪ ಅಷ್ಟಗಿ, ತಾಪಂ ಮಾಜಿ ಸದಸ್ಯ ಮಹದೇವ ದಂಡಿನ, ಭಾರತ ಸೇವಾದಳ ತಾಲೂಕ ಅಧ್ಯಕ್ಷ ಮಂಜುನಾಥ ತಿರ್ಲಾಪುರ, ಗ್ರಾಪಂ ಸದಸ್ಯ ಚಂದ್ರಗೌಡ ಪಾಟೀಲ, ಬಸವರಾಜ ವೆಂಕಟಾಪುರ, ಗೌರಪ್ಪ ಹುಂಬೇರಿ, ಮಂಜುನಾಥ ಬಾರಕೇರ, ವಿರೂಪಾಕ್ಷ ಹೊಸಕೇರಿ, ನಾಗನಗೌಡ ಪಾಟೀಲ, ಮೌನೇಶ ಪತ್ತಾರ, ಇತರರು ಇದ್ದರು.
ಸ್ಪರ್ಧೆಯಲ್ಲಿ ಕಾಳಗಿನಕೊಪ್ಪದ ಶ್ರೀ ಬೀರಲಿಂಗೇಶ್ವರ ಪ್ರಸನ್ನ (ಪ್ರಥಮ), ಮುರಗೋಡದ ಶ್ರೀರಾಮ ಪ್ರಸನ್ನ (ದ್ವಿತೀಯ) ಹಾಗೂ ಖಾದರ ಅಹ್ಮದ ಬಡಗಾಂವಕರ (ತೃತೀಯ) ಎತ್ತುಗಳು ಬಹುಮಾನ ಪಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net