ಗಮನ ಸೆಳೆದ ‘ಅನ್ನದಾತ’ ಮತಗಟ್ಟೆ

25 HANUR 3 (1)
ಚಿಕ್ಕಮಾಲಾಪುರ ಗ್ರಾಮದಲ್ಲಿ ತೆರೆದಿರುವ ಅನ್ನದಾತ ಮತಗಟ್ಟೆಯನ್ನು ಚಪ್ಪರ ಹಾಕಿ ತಳೀರು ತೋರಣದಿಂದ ಸಿಂಗಾರ ಮಾಡಿರುವುದು.
Published on

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಮಾಲಾಪುರ ಗ್ರಾಮದಲ್ಲಿ ರೈತರಿಗಾಗಿ ತೆರೆದಿರುವ ಅನ್ನದಾತ ಮತಗಟ್ಟೆಯನ್ನು ವಿಶೇಷವಾಗಿ ಸಿಂಗರಿಸಲಾಗಿದೆ. ಗುರುವಾರ ಆಗಮಿಸಿದ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು.

ರೈತರನ್ನು ಆಕರ್ಷಿಸುವ ಸಲುವಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ 247ರ ಮತಗಟ್ಟೆಯನ್ನು ಹಸಿರು ತಳಿರು-ತೋರಣಗಳಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಯ ಮುಂಭಾಗ ಚಪ್ಪರ ಹಾಕಿ ಪುಷ್ಪಗಳಿಂದ ಸಿಂಗಾರ ಮಾಡಲಾಗಿತ್ತಲ್ಲದೇ ರಂಗೋಲಿ ಬಿಡಿಸಿ ಸಿಂಗರಿಸಲಾಗಿತ್ತು. ಚುನಾವಣೆಯ ಪರ್ವ ದೇಶದ ಗರ್ವ, ನನ್ನ ಮತ ನನ್ನ ಹಕ್ಕು ಘೋಷವಾಕ್ಯವನ್ನು ಹಾಕಲಾಗಿತ್ತು. ಅಕ್ಕಿ, ರಾಗಿ ಹಾಗೂ ದ್ವಿದಳ ಧಾನ್ಯಗಳನ್ನಿಡಲಾಗಿತ್ತು. ಜತೆಗೆ ಮುಸುಕಿನ ಜೋಳವನ್ನು ರಾಶಿ ಹಾಕಿ ಅದರ ಮುಂಭಾಗ ನೇಗಿಲು ಹಾಗೂ ಕೃಷಿ ಪರಿಕರಣಗಳನ್ನು ಇಟ್ಟು ಪೂಜೆ ಸಲ್ಲಿಸಲಾಗಿತ್ತು. ಈ ಬಗ್ಗೆ ರೈತರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net