ಅಥರ್ವವೇದದಲ್ಲಡಗಿದೆ ಅಪೂರ್ವ ಜ್ಞಾನ

Felicitation To Prashant Vardhan
Published on

ಕುಮಟಾ: ಅಥರ್ವವೇದದಲ್ಲಿ ಆದಿದೈವಿಕ, ಆದಿ ಭೌತಿಕ ಹಾಗೂ ಆಧ್ಯಾತ್ಮಿಕ ವಿಚಾರಗಳು ಮಾತ್ರವಲ್ಲದೇ ಕೃಷಿ ವಿಜ್ಞಾನ, ವಾಣಿಜ್ಯ, ಶರೀರ ವಿಜ್ಞಾನ ಹಾಗೂ ಔಷಧ ವಿಜ್ಞಾನದ ಅದ್ಭುತ ಜ್ಞಾನ ಅಡಕವಾಗಿದೆ. ಅರ್ಥಶಾಸ್ತ್ರ ಹಾಗೂ ಶಿಲ್ಪಶಾಸ್ತ್ರ ಅಥರ್ವ ವೇದದ ಉಪವೇದಗಳು ಎಂದು ಅಥರ್ವವೇದ ವಿದ್ವಾಂಸ ವೇ. ರಮೇಶ ವರ್ಧನ್ ಹೇಳಿದರು.

ಹವ್ಯಕ ವಿದ್ಯಾವರ್ಧಕ ಸಂಘದ ಯಾಜ್ಞವಲ್ಕ್ಯ ಸಾಂಸ್ಕೃಕ ವೇದಿಕೆಯು ಹವ್ಯಕ ಸಭಾಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಧಾರ್ವಿುಕ ಉಪನ್ಯಾಸದಲ್ಲಿ ಅಥರ್ವವೇದ - ಜೀವನ ಮತ್ತು ವಿಜ್ಞಾನ ಕುರಿತು ಮಾತನಾಡಿದರು.

ಋಗ್ವೇದವು ಪದ್ಯದಲ್ಲೂ, ಯಜುರ್ವೇದವು ಗದ್ಯದಲ್ಲೂ ಮತ್ತು ಸಾಮವೇದವು ಗಾನರೂಪದಲ್ಲೂ ಇದ್ದರೆ ಅಥರ್ವವೇದವು ಋಷಿಯ ಹೆಸರಿನಲ್ಲಿದೆ. ಅಥರ್ವವೇದದಲ್ಲಿರುವ 1800 ಮಂತ್ರಗಳಿಗೆ ಅಥರ್ವ ಋಷಿ ದೃಷ್ಟಾರರಾದ್ದರಿಂದ ವೇದಕ್ಕೆ ಅವರ ಹೆಸರೇ ಬಂದಿದೆ. ವೇದದಲ್ಲಿ ಒಟ್ಟು 6000 ಕ್ಕೂ ಹೆಚ್ಚು ಮಂತ್ರಗಳಿವೆ. ಹಾಗೆಯೇ ಜನಮಾನಸದಲ್ಲಿ ಬಿಂಬಿತವಾಗಿರುವಂತೆ ಅಥರ್ವವೇದವೆಂದರೆ ವಾಮಾಚಾರ ಸಂಬಂಧಿತ ಅಲ್ಲವೇ ಅಲ್ಲ ಎಂದು ಸ್ಪಷ್ಟಪಡಿಸಿದರು.

ದೇಹವನ್ನು ಸೀಳದೆಯೇ ಒಳಗಿರುವ ಅಂಗಾಂಗಗಳ ಬಗ್ಗೆ ವೇದಕಾಲದಲ್ಲೇ ಕಂಡುಕೊಂಡ ಜ್ಞಾನವನ್ನು ಅಥರ್ವವೇದದಲ್ಲಿ ವಿವರಿಸಲಾಗಿದೆ. ಆಯುರ್ಜ್ಞಾನದ ಬಗ್ಗೆ ಅಥರ್ವ ವೇದದಲ್ಲಿ ಸಾವಿರ ವರ್ಷಗಳ ಹಿಂದಿನ ಉಲ್ಲೇಖವಿದೆ ಎಂದರು.

ಸಾಮೂಹಿಕ ವಿಷ್ಣುಸಹಸ್ರನಾಮ ಪಠಣದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಎನ್.ಹೆಗಡೆ ನಿರೂಪಿಸಿ ವಂದಿಸಿದರು. ಸಾವಿತ್ರಿ ಭಟ್ಟ, ಶ್ರೀರಾಮ ಭಟ್ಟ ಹಾಗೂ ವಿಘ್ನೕಶ್ವರ ಭಟ್ಟ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net