

ರಾಯಬಾಗ: ಸಹಕಾರಿ ಸಂಘಗಳು ಕೇವಲ ಸಾಲ ವಿತರಿಸುವುದಕ್ಕೆ ಸೀಮಿತವಾಗದೆ ಆರ್ಥಿಕವಾಗಿ ಬಲಿಷ್ಠವಾಗುವುದರತ್ತಲೂ ಗಮನ ಹರಿಸಬೇಕು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ತಾಲೂಕಿನ ಭಿರಡಿ ಗ್ರಾಮದ ಜಗಜ್ಯೋತಿ ಬಸವೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಟ್ಟಡ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಯಾವುದೇ ಅನುದಾನ, ಸಬ್ಸಿಡಿ, ಸಾಲಮನ್ನಾ, ಹಾಗೂ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಕಾರ್ಯಕ್ಕಷ್ಟೇ ಅಂಟಿಕೊಳ್ಳಬಾರದು. ರೈತರು ಪಿಕೆಪಿಎಸ್‌ನಿಂದ ಪಡೆದ ಸಾಲ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಬೇಕು. ಜತೆಗೆ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಪಿಕೆಪಿಎಸ್ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಯೋಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಡಿಸಿಸಿ ನಿರ್ದೇಶಕ ಅಪ್ಪಾಸಾಬ ಕುಲಗುಡೆ ಅಧ್ಯಕ್ಷತೆ ವಹಿಸಿದ್ದರು. ಸಿಬಿಕೆಎಸ್‌ಎಎಸ್‌ಕೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕ ಭರತೇಶ ಬನವಣೆ, ಮಲ್ಲಪ್ಪ ಮೈಶಾಳೆ, ಯುವ ಧುರೀಣ ಅಮಿತ ಘಾಟಗೆ, ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಕುಡಚಿ, ರಾಮಚಂದ್ರ ನಿಶಾನದಾರ, ಮಹಾದೇವ ಭೋರಗಾಂವೆ, ಎಸ್.ಎಂ.ಅಪ್ಪಾಜಿಗೋಳ, ಅಣ್ಣಾಸಾಬ ನಿಡವಣಿ, ಎಸ್.ಬಿ.ಪಾಟೀಲ, ಚಿದಾನಂದ ಬನಶಂಕರಿ, ಪಿ.ಬಿ.ರಾಯಣ್ಣವರ, ಶಾಂತನು ಭಿರ್ಡಿಕರ, ಉಜ್ವಲಾ ಶಿಂಧೆ, ಶೋಭಾ ನಿಡವಣಿ, ಬಾಳವ್ವ ಭೆಂಡೆ ಇತರರಿದ್ದರು.