ಸದಸ್ಯರ ಬೆಂಬಲದಿಂದ ಸಂಘ ಬಲಿಷ್ಠ

17sunti01.
ಕೊಡಗು ಜಿಲ್ಲಾ ಸರ್ಕಾರಿ ನಿವೃತ್ತ ಗೌಡ ಸಂಘದ ಅಧ್ಯಕ್ಷ ಕೊರನ ವಿಶ್ವನಾಥ್ ಹಾಗೂ ಗೌಡ ಸಂಘ ಸುಂಟಿಕೊಪ್ಪ ನಾಡು ಅಧ್ಯಕ್ಷ, ಪದಾಧಿಕಾರಿಗಳು ವಾರ್ಷಿಕ ಸಭೆ ಉದ್ಘಾಟಿಸಿದರು.
Published on

ಸುಂಟಿಕೊಪ್ಪ: ಸಂಘವು ಬಲಿಷ್ಠವಾಗಿ ಬೆಳೆಯಬೇಕಾದರೆ ಸದಸ್ಯರ ಸಂಪೂರ್ಣ ಬೆಂಬಲ ಅಗತ್ಯ ಎಂದು ಗೌಡ ಸಂಘ ಸುಂಟಿಕೊಪ್ಪ ನಾಡು ಅಧ್ಯಕ್ಷ ಯಂಕನ ಉಲ್ಲಾಸ್ ಹೇಳಿದರು.
ಇಲ್ಲಿನ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ 8ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮೂಲ ಧೇಯೋದ್ದೇಶ, ನಮ್ಮ ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಸಂಘವನ್ನು ಸ್ಥಾಪಿಸಲಾಗಿದೆ. ಕಳೆದ 7 ವರ್ಷಗಳಿಂದ ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳ ಸೇವೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಿದ ಜನಾಂಗದವರನ್ನು ಗುರುತಿಸಿ ವೇದಿಕೆಯ ಮುಖಾಂತರ ಗೌರವಿಸಲಾಗುತ್ತಿದೆ. ಕಳೆದ 7 ವರ್ಷಗಳಿಂದ ಗೌಡ ಸಂಘದ ಸಮಾಜ ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, ಸಂಘದ ಸದಸ್ಯರ ಧನಸಹಾಯ ನೀಡಿದ್ದಲ್ಲಿ ಮುಂದಿನ ದಿನಗಳಲ್ಲಿ ನಿವೇಶನ ಖರೀದಿಸಿ ಸಮಾಜ ನಿರ್ಮಿಸುವ ಇರಾದೆ ಹೊಂದಲಾಗಿದೆ ಎಂದರು.
ಕುಂಜಿಲನ ಎಸ್.ಮಂಜುನಾಥ್ ಮಾತನಾಡಿ, ಸಂಘದಲ್ಲಿ ಈಗಾಗಲೇ 800 ಸದಸ್ಯರಿದ್ದು, ಸಂಘವು ಸಧೃಡವಾಗಿ ಬೆಳೆಯಬೇಕಾದರೆ ಸದಸ್ಯರ ಸಂಪೂರ್ಣ ಬೆಂಬಲ ಅವಶ್ಯಕವಾಗಿದೆ ಎಂದರು.
2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಹೆಚ್ಚು ಅಂಕ ಗಳಿಸಿದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಬಲ್ಲಡ್ಕ ಅಭಿಜನ್, ಪುಳ್ಳಿಜ್ಜನ ರಿತೀಶ್, ವಾಣಿಜ್ಯ ವಿಭಾಗದ ಅಯ್ಯಂಡ್ರ ದಿವ್ಯಶ್ರೀ, ಯಂಕನ ವರ್ಧಿನಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕೊಡಗು ಜಿಲ್ಲಾ ಸರ್ಕಾರಿ ನಿವೃತ್ತ ಗೌಡ ಸಂಘದ ಅಧ್ಯಕ್ಷ ಕೊರನ ವಿಶ್ವನಾಥ್, ಗೌಡ ಸಂಘ ಸುಂಟಿಕೊಪ್ಪ ನಾಡು ಉಪಾಧ್ಯಕ್ಷ ಬಿಳಯರ ಜವಾಹರ್, ಪ್ರಧಾನ ಕಾರ್ಯದರ್ಶಿ ಯಂಕನ ಕೌಶಿಕ್, ಖಜಾಂಜಿ ಪಟ್ಟೆಮನೆ ಉದಯಕುಮಾರ್, ಸಹಕಾರ್ಯದರ್ಶಿ ಮಾಗಲು ವಸಂತ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು. ಕಾರ್ಯಕ್ರಮದ ಮೊದಲಿಗೆ ಬಿಳಿಯಾರ ಜವಾಹರ್ ಸ್ವಾಗತಿಸಿ, ಯಂಕನ ಕೌಶಿಕ್ ನಿರೂಪಿಸಿ, ಪಟ್ಟೆಮನೆ ಕುಸುಮಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net