

ಯಲ್ಲಾಪುರ: ಯಕ್ಷಗಾನ ಮನರಂಜನೆಯ ಜತೆಗೆ ಸಂಸ್ಕಾರ ನೀಡುವ ಕಲೆಯಾಗಿದೆ ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ತಾಲೂಕಿನ ಆನಗೋಡ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸುದರ್ಶನ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯಕ್ಷಗಾನ ಮತ್ತು ಕಲಾಮಿತ್ರ ಮಂಡಳಿ ಟ್ರಸ್ಟ್‌ನ 18ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದರ್ಶನ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಕೆ. ಗಾಂವ್ಕರ ಸಾಂಸ್ಕೃತಿಕ ಮನಸ್ಸು ಕಟ್ಟುವಲ್ಲಿ ಯಕ್ಷಗಾನದ ಪಾತ್ರ ಎಂಬ ಕುರಿತು ಉಪನ್ಯಾಸ ನೀಡಿದರು.
ಸುದರ್ಶನ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಭಟ್ಟ ಆನಗೋಡ ಇದ್ದರು. ಶಿಕ್ಷಕರಾದ ಶ್ರೀಧರ ಹೆಗಡೆ ಮಾಳಕೊಪ್ಪ, ಸತೀಶ ಯಲ್ಲಾಪುರ ನಿರ್ವಹಿಸಿದರು.
ನಂತರ ಸುಧನ್ವ ಮೋಕ್ಷ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಅನಂತ ಹೆಗಡೆ ದಂತಳಿಗೆ, ಶ್ರೀಕಲಾ ಹೆಗಡೆ, ಕೃಷ್ಣ ಹೆಗೆಡೆ ಜೋಗದಮನೆ, ಪ್ರಶಾಂತ ಹೆಗಡೆ ಕೈಗಡಿ ಭಾಗವಹಿಸಿದ್ದರು.ಸದಾಶಿವ ಮಲವಳ್ಳಿ, ಸುಬ್ರಾಯ ಹೆಗಡೆ ಮಳಗಿಮನೆ, ಶ್ರೀಧರ ಅಣಲಗಾರ, ರಾಮಕೃಷ್ಣ ಭಟ್ಟ ಕಂಚನಗದ್ದೆ, ತೇಜಸ್ ಹೆಗಡೆ ಮಾಳಕೊಪ್ಪ, ಶ್ರೀಶ ಹೆಗಡೆ ಕೊಂಡದಕೊಳಿ, ಶ್ರೀವತ್ಸ ಬಟ್ಲಗುಂಡಿ, ಆದರ್ಶ ಭಟ್ಟ ಈರಾಪುರ, ವೆಂಕಟ್ರಮಣ ಭಟ್ಟ ಹುಲಿಮನೆ, ಅಚ್ಯುತ ಭಟ್ಟ ಹಳಿಯಾಳ, ನಿತಿನ್ ಶಾನಭಾಗ ಪಾತ್ರ ನಿರ್ವಹಿಸಿದರು.