ಸಂಗೀತ ಕಲೆ ದಿವ್ಯ ಔಷಧ

Sangeeta
Published on

ನರಗುಂದ: ಮನಸಿಗೆ ಶಾಸ್ತ್ರೀಯ ಸಂಗೀತ ಮುದ ನೀಡುತ್ತದೆ. ಸಂಗೀತ ಕಲೆ ಮನುಷ್ಯನಿಗೆ ದಿವ್ಯ ಔಷಧ ಎಂದು ವ್ಯಾಖ್ಯಾನಿಸಲಾಗುತ್ತಿದೆ ಎಂದು ಭಾರತೀಯ ಸಂಗೀತ ವಿದ್ಯಾಲಯದ ಹಿರಿಯ ಸಂಗೀತ ಶಿಕ್ಷಕ ಶ್ರೀನಿವಾಸ ಇನಾಮದಾರ ತಿಳಿಸಿದರು.

ಪಟ್ಟಣದ ಭಾರತೀಯ ಸಂಗಿತ ವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಂಗೀತ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಪದವಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಕಲಬುರ್ಗಿ ಜೆಸ್ಕಾಂ ಸಹಾಯಕ ಇಂಜಿನಿಯರ್ ಸುಮೀತಕುಮಾರ ಇನಾಮದಾರ ಮಾತನಾಡಿ, ಸಂಗೀತ ಕಲಿಯಲು ಏಕಾಗ್ರತೆ, ತಾಳ್ಮೆ ಮುಖ್ಯವಾಗಿದೆ ಎಂದರು. ಕಾರ್ಯಕ್ರಮಕ್ಕೆ ರವೀಂದ್ರಪ್ರಸಾದ ದುಬೆ ಚಾಲನೆ ನೀಡಿದರು. ನಿವೃತ್ತ ದೈಹಿಕ ಶಿಕ್ಷಕಿ ಶಾರದಾಬಾಯಿ ಮಾತನಾಡಿದರು.

ವಿಜಯಲಕ್ಷ್ಮೀ ತಡಸದ, ವೀಣಾ ಇಂಗಳಳ್ಳಿ, ಅನನ್ಯಾ ಆನೇಗುಂದಿ, ಮಂಜುಳಾ ಮಿಕ್ಕಲ ಅವರು ಹಿಂದುಸ್ತಾನಿ ಸಂಗೀತ ಪ್ರಸ್ತುತಪಡಿಸಿದರು. ಗುರುದೇವ ಇಂಗಳಳ್ಳಿ, ವಸಂತ ಸುಳ್ಳದ ಚೇತನ ಬಿ, ನಿತಿನ್ ಬಿ, ಗುರುದರ್ಶನ ಬೆಳಗಾವಿ, ಮಂಜುನಾಥ ಪಲ್ಲೇದ ದಾಸ ಸಾಹಿತ್ಯ ಪ್ರಸ್ತುತಪಡಿಸಿದರು.

ಸೃಷ್ಟಿ ಬೆಂತೂರ, ಕೃಷ್ಣವೇಣಿ ಕನಕರಡ್ಡಿ, ವೈಷ್ಣವಿ ಮುಳ್ಳೂರ, ಶ್ರೀನಿಧಿ ಕುಲಕರ್ಣಿ, ಮಾಣಿಕ್ಯ ಯರಗಟ್ಟಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀನಿವಾಸ ಇನಾಮದಾರ ಹಾರ್ಮೋನೀಯಂ, ದಿಲೀಪರಾವ್ ಇನಾಮದಾರ ತಬಲಾ ಸಾಥ್ ನೀಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಂದ್ರಕಾಂತ ಇನಾಮದಾರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net