

ಕಿಕ್ಕೇರಿ: ನಾಟಕಗಳು ಜನಸಾಮಾನ್ಯರ ಬದುಕನ್ನು ಪರಿವರ್ತಿಸುವ ದಾರಿದೀಪವಾಗಿವೆ ಎಂದು ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ತಿಳಿಸಿದರು.
ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಮಂಗಳವಾರ ಏರ್ಪಡಿಸಿದ್ದ ಭೀಮ-ದುರ್ಯೋಧನರ ‘ಗದಾಯುದ್ಧ’ ಪೌರಾಣಿಕ ನಾಟಕ ಸಮಾರಂಭದಲ್ಲಿ ಮಾತನಾಡಿದರು. ಹಳ್ಳಿಗಳಲ್ಲಿ ನಾಟಕ ಕಲೆ ಜೀವಂತವಾಗಿರುವುದರಿಂದಲೇ ಸಾಮರಸ್ಯದ ಬದುಕು ಮೂಡಿದೆ. ಕೆಟ್ಟದನ್ನು ಮಾಡಿದರೆ ಸಿಗುವ ಶಿಕ್ಷೆ, ಒಳಿತನ್ನು ಮಾಡಿದರೆ ದೊರೆಯುವ ಉತ್ತಮ ಫಲ, ಕೆಡುಕಿನಿಂದ ಆಗುವ ಸರ್ವನಾಶ ಎಲ್ಲವನ್ನೂ ನಾಟಕಗಳು ನೇರವಾಗಿ ತಿಳಿಸುತ್ತವೆ. ಮನಸ್ಸಿಗೆ ಮುದ ನೀಡುವ ರಂಗಕಲೆಯನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಊಗಿನಕೊಪ್ಪಲು ಗ್ರಾಮದಿಂದ ಮಾದಾಪುರದವರೆಗೆ ರಸ್ತೆ ಡಾಂಬರೀಕರಣ, ಮಾದಾಪುರ ಗೇಟ್ ಬಳಿ ಬಸ್ ನಿಲುಗಡೆ ಮಾಡಿಸಿಕೊಡಲು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಲಕ್ಷ್ಮೀಪುರ ಗ್ರಾಪಂ ಅಧ್ಯಕ್ಷ ಕನಕ ರಾಜೇಶ, ಉಪಾಧ್ಯಕ್ಷ ಬಸವರಾಜು, ಮಾಜಿ ಅಧ್ಯಕ್ಷ ಅಶೋಕ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಸ್.ಧರ್ಮಪ್ಪ, ನ್ಯಾಯಬೆಲೆ ತಿಮ್ಮಶೆಟ್ಟಿ, ಎಚ್.ಟಿ.ಲೋಕೇಶ್, ವಕೀಲ ಧನಂಜಯ, ಎನ್.ಎನ್. ಪರಮೇಶ್, ಮುರುಳೀಧರ್, ಅಶೋಕ್, ಉಮೇಶ್, ಶ್ರೀಧರ್, ಮಮತಾ ಪರಮೇಶ್, ಶ್ವೇತಾ ಕುಮಾರ್, ಸ್ವಾಮಿ, ಅನಿತಾ ಬಬ್ರುವಾಹನ, ಪುಷ್ಪಲತಾ ರಾಮಕೃಷ್ಣ, ಚಂದ್ರಕಲಾ ಶಿವಯ್ಯ, ನೇತ್ರಾವತಿ ಚಂದ್ರೇಗೌಡ, ಮಂಜುಳಾ ಲೋಕೇಶ್‌ಗೌಡ, ಎಸ್.ಎನ್. ಗಿರೀಶ್ ಹಾಜರಿದ್ದರು.