

ಗಂಗೊಳ್ಳಿ: ಹಿತ್ಲುಗದ್ದೆಮನೆ ಬಂದರು ಗಂಗೊಳ್ಳಿ ಶ್ರೀ ಪಂಜುರ್ಲಿ ದೈವಸ್ಥಾನದ ನಾಗದೇವರು, ಅಮ್ಮನವರ ಹಾಗೂ ಪಂಜುರ್ಲಿ ಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ದೇವರ ಬಿಂಬವನ್ನು ರಥಬೀದಿಯಿಂದ ಪುರಮೆರವಣಿಗೆ ಮೂಲಕ ಭಾನುವಾರ ದೈವಸ್ಥಾನಕ್ಕೆ ತರಲಾಯಿತು. ದೈವಸ್ಥಾನ ಆಡಳಿತ ಮಂಡಳಿ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯರು, ಭಕ್ತರು ಪುರಮೆರವಣಿಯಲ್ಲಿ ಪಾಲ್ಗೊಂಡಿದ್ದರು. ಜ.20ರಂದು ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದೆ. 21ರಂದು ನಾಗ ದೇವರು, ಅಮ್ಮನವರ ಹಾಗೂ ಪಂಜುರ್ಲಿ ಪರಿವಾರ ದೈವಗಳ ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದೆ.