ವಾರ್ಷಿಕ ಸರ್ವಸಾಧಾರಣ ಸಭೆ ನಾಳೆ

CHETANA SHAKARI MUDRANA
Published on

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ರಂಗದಲ್ಲಿ ಮುದ್ರಣ ಕಾರ್ಯದೊಂದಿಗೆ ಗಮನಸೆಳೆದ ಇಲ್ಲಿಯ ದಿ ಚೇತನಾ ಪ್ರಿಂಟಿಂಗ್ ಆಂಡ್ ಪಬ್ಲಿಷಿಂಗ್ ಕೋ-ಆಪ್ ಸೊಸೈಟಿ ಲಿ., ಇದರ 36ನೇ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಸಮ್ಮಾನ ಕಾರ್ಯಕ್ರಮವು ನಗರದ ಟಿ.ಎಂ.ಎಸ್. ಸಭಾಂಗಣದಲ್ಲಿ ಸೆ. 23ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ, 2023-24ನೇ ಸಾಲಿನಲ್ಲಿ ಸಂಘವು 3,95,878 ರೂ. ನಿವ್ವಳ ಲಾಭಗಳಿಸಿದೆ. ಒಟ್ಟು 308 ಷೇರು ಸದಸ್ಯರನ್ನು ಹೊಂದಿರುವ ಸಂಸ್ಥೆಯಲ್ಲಿ 2.45 ಲಕ್ಷ ರೂ ಷೇರು ಬಂಡವಾಳ, ಒಟ್ಟೂ ನಿಧಿಗಳು 144.42 ಲಕ್ಷ ರೂ.ಗಳಿದ್ದು, 51.82 ಲಕ್ಷ ರೂ. ಗುಂತಾವಣೆಯಿದೆ. ಈ ಬಾರಿ ಒಟ್ಟು 1.23 ಕೋಟಿ ರೂಪಾಯಿಗೂ ಅಧಿಕ ಮುದ್ರಣ ಕಾರ್ಯ ಮಾಡಲಾಗಿದೆ. ಸಂಘದಲ್ಲಿ 34 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಭಾಕರ ವಿ. ಹೆಗಡೆ ಕಂಪ್ಲಿ, ಸಂಘದ ಏಳಿಗೆಗೆ ಶ್ರಮಿಸಿದ ಎಸ್.ಪಿ. ಶೆಟ್ಟಿ ಹಾಗೂ ಟಿ.ಎಂ.ಎಸ್ ಶಿರಸಿಯ ಮುಖ್ಯ ಕಾರ್ಯನಿರ್ವಾಹಕರಾಗಿ ನಿವೃತ್ತಿಗೊಂಡ ಎಂ.ಎ. ಹೆಗಡೆ ಕಾನಮುಸ್ಕಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net