ವ್ಯಸನಮುಕ್ತ ಸಮಾಜ ನಿರ್ಮಾಣದ ಉದ್ದೇಶ

15 MND 1
Published on

ಮುಂಡಗೋಡ: ಸಂತ ಸೇವಾಲಾಲರು ಸತ್ಯ, ಅಹಿಂಸೆ, ದಯೇ ಕರುಣೆ ಪಾಲಿಸುವುದರೊಂದಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದು ಸಂತ ಸೇವಾಲಾಲರ ಮೂಲ ಉದ್ದೇಶವಾಗಿತ್ತು ಎಂದು ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ ಹೊಸಮನಿ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದ ಜಯಂತಿ ಸಭಾಭವನಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲರ 286ನೇ ಜಯಂತ್ಯುತ್ಸದದಲ್ಲಿ ಅವರು ಮಾತನಾಡಿದರು.

ಬಂಜಾರ ಸಮಾಜದ ಮುಖಂಡ ರಾಮಣ್ಣ ಲಮಾಣಿ ಮಾತನಾಡಿದರು. ಶಿಕ್ಷಕ ವಸಂತ ರಾಠೋಡ ಉಪನ್ಯಾಸ ನೀಡಿದರು.

ಉಪ ತಹಸೀಲ್ದಾರ್ ಜಿ.ಬಿ. ಭಟ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಕೃಷ್ಣ ಕೂಳ್ಳೂರ, ಪ.ಪಂ. ಮುಖ್ಯಾಧಿಕಾರಿ ಚಂದ್ರಶೇಖರ ಬಿ., ಚಿದಾನಂದ ಹರಿಜನ, ಶೇಖರ ಲಮಾಣಿ, ಶಂಕರ ಲಮಾಣಿ, ಶಾರದಾ ರಾಠೋಡ, ಸೋಮಲ್ಲಪ್ಪ ಲಮಾಣಿ, ಪ್ರಕಾಶ ಚಂದಾಪುರ, ಪ್ರಸನ್ನ ಲಮಾಣಿ, ಢಾಕಪ್ಪ ಲಮಾಣಿ, ಪ್ರದೀಪ ಚವ್ಹಾಣ, ಹೇಮಲಪ್ಪ ಲಮಾಣಿ, ದೇವರಾಜ ಲಮಾಣಿ, ಶಿವಪ್ಪ ಲಮಾಣಿ, ಮಂಜುನಾಥ ಲಮಾಣಿ, ಚಂದ್ರು ಲಮಾಣಿ, ವೀಣಾ ರಾಠೋಡ, ಪ.ಪಂ. ಮತ್ತು ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು., ಜಿ.ಟಿ ಲಮಾಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net