ಕೃಷಿ ಖಾತೆ ಕ್ಯಾಬಿನೆಟ್ ದರ್ಜೆಗೆ ಒಳಪಡಲಿ

 ಹುಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಹದಿನಾರು ಶಿವಕುಮಾರ್, ಸತೀಶ್, ಅಂಬಳೆ ಕುಮಾರ್, ಚಿನ್ನಸ್ವಾಮಿ, ಬಸಪ್ಪ, ಸಿದ್ದರಾಜು, ವೀರಭದ್ರಪ್ಪ, ಮಹೇಶ್, ಮಾದಪ್ಪ, ಪ್ರಕಾಶ್, ಪಾಪಣ್ಣ, ಶಂಕ್ರಪ್ಪ, ಧರ್ಮೇಂದ್ರ, ಬಸವಣ್ಣ, ಸೋಮಣ್ಣ ಪಾಲ್ಗೊಂಡಿದ್ದರು.

Published on

ನಂಜನಗೂಡು: ಸಂಘಗಳು ಎಷ್ಟೇ ಸ್ಥಾಪನೆಯಾದರೂ ಹಸಿರು ಶಾಲು ಧರಿಸಲೇಬೇಕು ಎಂದು ರೈತ ಮುಖಂಡ ಹದಿನಾರು ಶಿವಕುಮಾರ್ ತಿಳಿಸಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತ ಸಂಘ ಸ್ಥಾಪನೆ ಮಾಡುವ ಸಂಬಂಧ ದುಗ್ಗಹಳ್ಳಿ ಸತೀಶ್ ನೇತೃತ್ವದಲ್ಲಿ ಭಾನುವಾರ ಆಯೋ ಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಕೃಷಿ ಮಂತ್ರಿ ಖಾತೆಯನ್ನು ನಮಗೆ ಕೊಡಿ ಎಂದು ಕೇಳುವವರಿಲ್ಲದಂತಾಗಿದೆ. ಕೃಷಿ ಖಾತೆಯನ್ನು ಕ್ಯಾಬಿನೆಟ್ ದರ್ಜೆಗೆ ಸೇರಿಸಬೇಕು. ರೈತರು ತಾವು ಬೆಳೆದ ಬೆಳೆಗಳನ್ನು ಮಾರಲು ದಳ್ಳಾಳಿಗಳ ಹಿಂದೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದಕಾರಣ ನೂತನವಾಗಿ ಅಖಿಲ ಕರ್ನಾಟಕ ರಾಜ್ಯ ಹಿತ ಅಭಿವೃದ್ಧಿ ರೈತರ ಸಂಘ ಎಂದು ನಾಮಕರಣ ಮಾಡಲಾಗಿದೆ. ರಾಜ್ಯದ ಎಲ್ಲ ಗ್ರಾಮಗಳಲ್ಲೂ ನಮ್ಮ ಸಂಘ ಸ್ಥಾಪನೆ ಮಾಡುವ ಮೂಲಕ ರೈತರ ಹಿತ ಕಾಪಾಡುವುದೇ ಇದರ ಉದ್ದೇಶವಾಗಿದೆ ಎಂದರು.

ಸಭೆಯಲ್ಲಿ ಮುಖಂಡರಾದ ಅಂಬಳೆ ಕುಮಾರ್, ಚಿನ್ನಸ್ವಾಮಿ, ಬಸಪ್ಪ, ಸಿದ್ದರಾಜು, ವೀರಭದ್ರಪ್ಪ, ಮಹೇಶ್, ಮಾದಪ್ಪ, ಪ್ರಕಾಶ್, ಪಾಪಣ್ಣ, ಶಂಕ್ರಪ್ಪ, ಧರ್ಮೇಂದ್ರ, ಬಸವಣ್ಣ, ಸೋಮಣ್ಣ, ಮಹದೇವಯ್ಯ, ನಂದಿ, ವೆಂಕಟೇಶ್, ಸಿದ್ದರಾಜು, ಸುರೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net