ಗಮನ ಸೆಳೆದ ‘ಅಗಡಿ ಕನ್ನಡ ಹಬ್ಬ’ ಸಂಭ್ರಮ

LXR KANNADA HABBA
Published on

ಲಕ್ಷೆ್ಮೕಶ್ವರ: ಪಟ್ಟಣದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ. ಅಗಡಿ ಇಂಜಿನಿಯರಿಂಗ್ ಮಹಾವಿದ್ಯಾಲಯ ಹಾಗೂ ಪದವಿ ಪೂರ್ವ ಕಾಲೇಜ್​ನಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿರುವ 10ನೇ ವರ್ಷದ ಅಗಡಿ ಕನ್ನಡ ಹಬ್ಬ ಸಂಭ್ರಮ ಕಾರ್ಯಕ್ರಮದಲ್ಲಿ ಗುರುವಾರ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಸಂಭ್ರಮ ನೆರವೇರಿತು.

ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ, ಶಿರಹಟ್ಟಿ ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ನಾಗರಾಜ ಕಳಸಾಪುರ ನೃತ್ಯ ಸಂಭ್ರಮಕ್ಕೆ ಚಾಲನೆ ನೀಡಿದರು. ಕಾಲೇಜ್ ಆವರಣದಲ್ಲಿ ಕನ್ನಡ ಜನಪದ ಸಂಪ್ರದಾಯದ ಉಡುಗೆ ತೊಟ್ಟ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಂಭ್ರಮ ಮನೆ ಮಾಡಿತ್ತು. ಇಂಜಿನಿಯರಿಂಗ್ ಹಾಗೂ ಪದವಿಪೂರ್ವ ಕಾಲೇಜ್​ನ 80 ವಿದ್ಯಾರ್ಥಿಗಳ ತಂಡ 30 ನಿಮಿಷಗಳ ಕಾಲ ಕನ್ನಡ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದರು.

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಬಾರಿಸು ಕನ್ನಡ ಡಿಂಡಿಮವ, ಸೋಜುಗದ ಸೂಜಿ ಮಲ್ಲಿಗೆ, ಗಲ್ಲು ಗಲ್ಲೆನುತಾ ಗೆಜ್ಜೆ, ಜೊತೆಯಲಿ ಜೊತೆ ಜೊತೆಯಲಿ, ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ಕನ್ನಡ ಚಲನಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರು ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಅಗಡಿ ಇಂಜಿನಿಯರ್ ಕಾಲೇಜಿನ ಪ್ರಾಚಾರ್ಯ ಡಾ.ಪರಶುರಾಮ ರ್ಬಾ, ಪಪೂ ಕಾಲೇಜಿನ ಪ್ರಾಚಾರ್ಯ ಡಾ.ಎನ್. ಹಯವದನ, ಮುಖ್ಯ ಆಡಳಿತ ಅಧಿಕಾರಿ ಪ್ರೊ. ವಿಕ್ರಮ ಶಿರೋಳ, ಕಾರ್ಯಕ್ರಮದ ಸಂಯೋಜಕ ಪೊ›. ಸೋಮಶೇಖರ ಕೆರಿಮನಿ, ಸಮೂಹ ನೃತ್ಯ ಉಸ್ತುವಾರಿ ಪೊ›. ಬಸವರಾಜ ಸೊರಟೂರ, ಪೊ›. ರಾಜೇಶ್ವರಿ ಗಾಮನಗಟ್ಟಿ, ಡಾ.ಆರ್.ಎಂ. ಪಾಟೀಲ, ರವಿಪ್ರಕಾಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net