ಹೋರಾಟಗಾರರು ಶೀಘ್ರ ಸಭೆ ಸೇರಿ ನಿರ್ಧಾರ

The activists will meet soon and decide.
ಮಹಾಲಿಂಗಪುರ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ಆಯೋಜಿಸಿದ್ದ ತಾಲೂಕು ಹೋರಾಟ ಸಮಿತಿ ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿದರು. ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಗಂಗಾಧರ ಮೇಟಿ, ಮಹಾಲಿಂಗ ಮನ್ನಯ್ಯನವರಮಠ ಇದ್ದರು.
Published on

ಮಹಾಲಿಂಗಪುರ: ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ರಚನೆ ಮಾಡಲು ಬೇಕಾಗಿರುವ ಎಲ್ಲ ದಾಖಲೆ ಲಗತ್ತಿಸಿದ ವರದಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಕಂದಾಯ ಇಲಾಖೆಗೆ ಹೋಗಿದ್ದು, ನಮ್ಮ ಹೋರಾಟ ನಿರ್ಣಾಯಕ ಘಟ್ಟ ತಲುಪಿದೆ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಹೇಳಿದರು.

ಸ್ಥಳೀಯ ಜಿಎಲ್‌ಬಿಸಿ ಅತಿಥಿ ಗೃಹದಲ್ಲಿ ಭಾನುವಾರ ತಾಲೂಕು ಹೋರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, 1161 ದಿನಗಳ ನಮ್ಮ ಸುದೀರ್ಘ ಹೋರಾಟಕ್ಕೆ ಸರ್ಕಾರ ಸ್ಪಂದಿಸುವಲ್ಲಿ ವಿಳಂಬ ನೀತಿ ಅನುಸರಿಸಿದೆ. ಇದರಿಂದ ಹೋರಾಟಗಾರರ ಸಹನೆ ಕಟ್ಟೆ ಒಡೆದಿದೆ. ತಾಲೂಕು ರಚನೆಗೆ ಸರ್ಕಾರ ಇನ್ನೂ ತಡ ಮಾಡಿದರೆ ಹೋರಾಟ ತೀವ್ರಗೊಳಿಸಲಾಗುವುದು. ಶೀಘ್ರದಲ್ಲಿ ಸಭೆ ಸೇರಿ ಉಗ್ರ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ರಾಜ್ಯ ರೈತ ಸಂಘದ ಮುಖಂಡ ಗಂಗಾಧರ ಮೇಟಿ, ನ್ಯಾಯವಾದಿ ಮಹಾಲಿಂಗ ಮನ್ನಯ್ಯನವರಮಠ, ಹೋರಾಟಗಾರರಾದ ವೀರೇಶ ಆಸಂಗಿ, ಶಿವಾ ಟಿರಕಿ, ಬಂದು ಪಕಾಲಿ, ಶೇಖರ ಅಂಗಡಿ ಮಾತನಾಡಿ, ಹಣಕಾಸು ಇಲಾಖೆಯಿಂದಲೂ ಸಕಾರಾತ್ಮಕ ವರದಿ ಹೋಗುವಂತೆ ನೋಡಿಕೊಳ್ಳಬೇಕು ಎಂದರು.

ಮಹಾಲಿಂಗಪುರ ಕೇಂದ್ರ ಸ್ಥಾನವನ್ನಾಗಿರಿಸಿ ಗ್ರಾಮಗಳಾದ ಚಿಮ್ಮಡ, ಕೆಸರಗೊಪ್ಪ, ಬಿಸನಾಳ, ಸೈದಾಪುರ, ಮಾರಾಪುರ, ಬುದ್ನಿ ಪಿಡಿ, ಸಂಗಾನಟ್ಟಿ, ಮದಭಾವಿ, ಢವಳೇಶ್ವರ, ನಂದಗಾಂವ ಹಾಗೂ ಮುಧೋಳ ತಾಲೂಕಿನ ರನ್ನಬೆಳಗಲಿ ಪಟ್ಟಣ, ಅಕ್ಕಿಮರಡಿ, ಮಿರ್ಜಿ, ಮಲ್ಲಾಪುರ, ನಾಗರಾಳ ಗ್ರಾಮವನ್ನೊಳಗೊಂಡು ಮಹಾಲಿಂಗಪುರ ತಾಲೂಕು ರಚನೆ ಕುರಿತು ಸಕಾರಾತ್ಮಕ ವರದಿ ಸಲ್ಲಿಕೆಯಾಗಿದೆ.

ತಾಲೂಕು ಹೋರಾಟಗಾರರಾದ ಸಿದ್ದು ಶಿರೋಳ, ನಿಂಗಪ್ಪ ಬಾಳಿಕಾಯಿ, ಈಶ್ವರ ಮುರಗೋಡ, ಹನುಮಂತ ಜಮಾದಾರ, ದುಂಡಪ್ಪ ಜಾಧವ, ಭೀಮಶಿ ಸಸಾಲಟ್ಟಿ, ಪರಪ್ಪ ಹುದ್ದಾರ, ಮಹಮ್ಮದ ರಫೀಕ್ ಮಾಲದಾರ, ಮಲ್ಲು ಮಿರ್ಜಿ, ಭೀಮಶಿ ನಾಯಕ, ದುಂಡಪ್ಪ ಇಟ್ನಾಳ, ಮಹಾಲಿಂಗಪ್ಪ ಅವರಾದಿ, ಚನ್ನಪ್ಪ ಪಟ್ಟಣಶೆಟ್ಟಿ, ನ್ಯಾಯವಾದಿಗಳಾದ ಶಿವಾನಂದ ಉಳ್ಳಾಗಡ್ಡಿ, ಎಂ.ಕೆ. ಸಂಗನ್ನವರ, ಎ.ಎ. ಮುರಗೋಡ, ಎಂ.ಬಿ. ಬಡಿಗೇರ, ಅನಿಲ ಓಸ್ವಾಲ, ಕೆ.ಐ. ಜಕಾತಿಮಠ, ಎಂ.ಬಿ. ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net