ಮೈಮೇಲೆ ಡಿಸೇಲ್ ಸುರಿದುಕೊಂಡ ಕಾರ್ಯಕರ್ತ

27-03-Shiva-4
ಮಾಜಿ ಸಂಸದ ಬಿ.ವಿ.ನಾಯಕಗೆ ಬಿಜೆಪಿ ಟಿಕೆಟ್ ನೀಡದಿರುವುದನ್ನು ಖಂಡಿಸಿ ರಾಯಚೂರು ಗಾಂ ವೃತ್ತದ ಬಳಿ ಬೆಂಬಲಿಗ ಶಿವಮೂರ್ತಿ ಮೈಮೇಲೆ ಡಿಸೇಲ್ ಸುರಿದುಕೊಂಡು ಬುಧವಾರ ಆತ್ಮಹತ್ಯೆಗೆ ಪ್ರಯತ್ನಿಸಿದರು.
Published on

ರಾಯಚೂರು: ಮಾಜಿ ಸಂಸದ ಬಿ.ವಿ.ನಾಯಕಗೆ ಟಿಕೆಟ್ ಕೈತಪ್ಪಿರುವುದನ್ನು ಖಂಡಿಸಿ ಸ್ಥಳೀಯ ಗಾಂ ವೃತ್ತದ ಬಳಿಯ ರಾಯಚೂರು ಹಬ್ ಬಳಿ ಇಬ್ಬರು ಬೆಂಬಲಿಗರು ಮೈಮೇಲೆ ಡಿಸೇಲ್ ಸುರುವಿಕೊಂಡು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ ಘಟನೆ ಬುಧವಾರ ಜರುಗಿತು.
ಪಕ್ಷದ ಕಾರ್ಯಕರ್ತರು ಮತ್ತು ಬಿವಿಎನ್ ಬೆಂಬಲಿಗರಿಂದ ಚಿಂತನಾ ಸಭೆ ಏರ್ಪಡಿಸಲಾಗಿತ್ತು. ಸಭೆಗ ಮುಂಚೆ ಕ್ಯಾನ್ ಹಿಡಿದುಕೊಂಡು ಬಂದ ಶಿವಮೂರ್ತಿ ಮತ್ತು ರಾಘವೇಂದ್ರ ಮೈಮೇಲೆ ಡಿಸೇಲ್ ಸುರಿದುಕೊಂಡು ಬಿ.ವಿ.ನಾಯಕಗೆ ಟಿಕೆಟ್ ನೀಡಬೇಕು ಎಂದು ಘೋಷಣೆ ಕೂಗಿದರು.
ಸ್ಥಳದಲ್ಲಿದ್ದ ಇತರರು ಅವರಿಂದ ಡಿಸೇಲ್ ಕ್ಯಾನ್ ಕಸಿದುಕೊಂಡು ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ. ಆತ್ಮಹತ್ಯೆಯಂತಹ ನಿರ್ಧಾರ ಬೇಡ ಎಂದು ಸಮಾಧಾನಿಸಿ ಕರೆದುಕೊಂಡು ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net