ವಿದ್ವಾಂಸರನ್ನು ಗೌರವಿಸುವ ಕಾರ್ಯ ಶ್ಲಾಘನೀಯ

4 YLP 2
Published on

ಯಲ್ಲಾಪುರ: ಧಾರ್ವಿುಕ ಕಾರ್ಯಕ್ರಮಗಳ ಜತೆಯಲ್ಲಿ ವಿದ್ವಾಂಸರನ್ನು, ಹಿರಿಯರನ್ನು ಗೌರವಿಸುವುದು ಅಭಿನಂದನಾರ್ಹ ಕಾರ್ಯ ಎಂದು ವಿದ್ಚಾಂಸ ವಿದ್ವಾನ್ ಗಂಗಾಧರ ಬೋಡೆ ಹೇಳಿದರು.

ತಾಲೂಕಿನ ಗುಂಡ್ಕಲ್ ‘ಶಿವಗಂಗಾ’ ಆವಾರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನವಾಕ್ಷರಿ ಮಂತ್ರ ಪುರಶ್ಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಂಘಟಕ ಮಂಜುನಾಥ ಭಟ್ಟ ಮಾತನಾಡಿ, ಕಳೆದ 11 ವರ್ಷಗಳಿಂದ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ. 21 ವಿದ್ವಾಂಸರನ್ನು ಸನ್ಮಾನಿಸಿದ ಸಾರ್ಥಕ ಭಾವ ನಮ್ಮದಾಗಿದೆ ಎಂದರು.

ವಿಶ್ವನಾಥ ಭಟ್ಟ ಬೆಳಖಂಡ ಅಧ್ಯಕ್ಷತೆ ವಹಿಸಿದ್ದರು. ವಿದ್ವಾಂಸರಾದ ನಾರಾಯಣ ಭಟ್ಟ ಮೊಟ್ಟೆಪಾಲ, ಡಾ.ಶಂಕರ ಭಟ್ಟ ಬಾಲೀಗದ್ದೆ, ಹಿರಿಯ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ, ಸಂಘಟಕರಾದ ಶಿವರಾಮ ಭಟ್ಟ, ಗಂಗಾ ಭಟ್ಟ, ಇತರರಿದ್ದರು.

ಶ್ರೀರಾಮ ಭಟ್ಟ ವೇದಘೊಷಗೈದರು. ಸುಬ್ರಾಯ ಭಟ್ಟ ಗುಂಡ್ಕಲ್ ನಿರ್ವಹಿಸಿದರು. ಸುಮಂಗಲಾ ಭಟ್ಟ ಹಾಗೂ ಶ್ರೀನಿಧಿ ಭಟ್ಟ ಅವರ ಭಗವದ್ಗೀತಾ ಪಠಣದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net