ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆ ಸಾಧನೆ ಅಪಾರ

15 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸ್ತುತ ಮಹಿಳೆಯರು ವಿಜ್ಞಾನ ತಂತ್ರಜ್ಞಾನ ಮತ್ತು ಅನ್ವೇಷಣೆ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಇಸ್ರೋದ ಲಿಯೋಸ್​ ವಿಭಾಗದ ಸಹ ನಿರ್ದೇಶಕಿ ಡಾ. ಕಲ್ಪನಾ ಅರವಿಂದ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯ ಮಹಿಳಾ ಸಂಶೋಧನಾ ಅಧ್ಯಯನ ಕೇಂದ್ರ ಮತ್ತು ಮಹಿಳಾ ಅಧ್ಯಯನ ವಿಭಾಗಗಳ ವತಿಯಿಂದ ಮಹಿಳಾ ದಿನ ನಿಮಿತ್ತ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿರುವ ವೇಗದ ಪ್ರಗತಿಯಲ್ಲಿ ಸ್ಪೂತಿರ್ದಾಯಕ ಮಹಿಳೆಯರ ಸೇರ್ಪಡೆ ಎಂಬ ವಿಷಯ ಕುರಿತು ಎರಡು ದಿನಗಳ ವಿಚಾರ ಸಂಕಿರಣಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇಸ್ರೋ ಹುಟ್ಟಿದಾಗಿಂದ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದು, ಮೇಕ್​ ಇನ್​ ಇಂಡಿಯಾ ಯೋಜನೆ ಅಡಿ ದೇಶಿ ನಿಮಿರ್ತ ಅನೇಕ ಉಪಗ್ರಹಗಳನ್ನು ನಿರ್ಮಾಣ ಮಾಡಲಾಗಿದೆ. ಇಸ್ರೋದ ಬೆಳವಣಿಗೆಯಲ್ಲಿ ಅನೇಕ ಮಹಿಳಾ ವಿಜ್ಞಾನಿಗಳ ಕೂಡುಗೆ ಇದೆ. ವಿಜ್ಞಾನ ತಂತ್ರಜ್ಞಾನ ೇತ್ರದಲ್ಲಿ ಮಹಿಳೆಯರು ಸಾಕಷ್ಟು ಸಾಧನೆ ಮಾಡಿದ್ದಾರೆ ಎಂದರು.
ಬೆಂಗಳೂರಿನ ಅವಸರ ೌಂಡೇಶನ್​ ನಿರ್ದೇಶಕಿ ಮಾಳವಿಕ ಚತುರ್ವೇದಿ ಮಾತನಾಡಿದರು. ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸಿದ್ದರು.
ಸಾಮಾಜಿಕ ನ್ಯಾಯ ಪಡೆಯುವಲ್ಲಿ ಮಹಿಳಾ ಹಕ್ಕುಗಳು ಕುರಿತು ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಡಾ. ಲಕ್ಷಿ$್ಮದೇವಿ ವೈ., ಮಹಿಳಾ ಆರೋಗ್ಯ& ೇಮಾಭಿವೃದ್ಧಿ ಕುರಿತು ಕವಿವಿ ಡೀನ್​ ಜಯಶ್ರೀ ಎಸ್​., ಮಹಿಳಾ ಮಕ್ಕಳ ಅಭಿವೃದ್ಧಿಗೆ ಸರ್ಕಾರಿ ಯೋಜನೆಗಳು ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕಿ ಪದ್ಮಾವತಿ. ಜಿ ಹಾಗೂ ಸಾಹಿತ್ಯ ಮತ್ತು ಸಂಸತಿಯಲ್ಲಿ ಮಹಿಳೆ ಕುರಿತು ಲೇಖಕಿ ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿದರು.
ಸಿಂಡಿಕೇಟ್​ ಸದಸ್ಯೆ ರತ್ನಾ ಪಾಟೀಲ, ಕವಿವಿ ಕುಲಸಚಿವ ಡಾ.ಎ ಚೆನ್ನಪ್ಪ, ಹಣಕಾಸು ಅಧಿಕಾರಿ ಪ್ರೊ. ಸಿ.ಕೃಷ್ಣಮೂತಿರ್, ಡಾ. ಸಂಗೀತಾ ಮಾನೆ, ಡಾ.ಪುಷ್ಪ ಹೊಂಗಲದ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net