ಎಲ್ಲ ರಂಗದಲ್ಲೂ ಮಹಿಳೆಯರ ಸಾಧನೆ ಅಪಾರ

KLG MAHILA DINA
Published on

ಕಲಘಟಗಿ: ಮಹಿಳೆಯರು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರದೆ ತಂತ್ರಜ್ಞಾನ, ಆರ್ಥಿಕ, ರಾಜಕೀಯ, ಶಿಕ್ಷಣ ಹಾಗೂ ಕ್ರೀಡೆ ಹೀಗೆ ಸಮಾಜದ ಸರ್ವ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗೀತಾ ಡಂಗ್ರೋಜಿ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕಲ್ಪವೃಕ್ಷ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದಿಂದ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ‘ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜನೀಯ ಸ್ಥಾನವಿದೆ. ಒಳ್ಳೆಯ ಸಂಸ್ಕಾರ ಯುತವಾದ ಜೀವನ ನಡೆಸುವ ಮಹಿಳೆ ತನ್ನ ಅಮೋಘವಾದ ಚಾರಿತ್ರ್ಯಂದ ಜಗತ್ತಿನ ಮೊದಲ ಗುರುವಾಗಿದ್ದಾಳೆ’ ಎಂದರು.

ವಿಶ್ವಕರ್ಮ ಸಮಾಜದ ಮಹಿಳಾ ಅಧ್ಯಕ್ಷೆ ರತ್ನಾ ಬಡಿಗೇರ ಮಾತನಾಡಿ, ‘ಒಂದು ಕಾಲದಲ್ಲಿ ಮಹಿಳೆಯನ್ನು ಅಬಲೆಯಾಗಿ ಪರಿಗಣಿಸಿ ಶೋಷಣೆ ಮಾಡುವ ಕಾಲವಿತ್ತು. ಮಹಿಳೆಗೆ ಎಲ್ಲ ಸಾಮರ್ಥ್ಯವಿದ್ದರೂ ಅವಕಾಶದಿಂದ ವಂಚಿತೆಯಾಗಿದ್ದಳು. ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಬಹು ದೊಡ್ಡ ಸಾಧನೆ ಮಾಡಿದ್ದಾರೆ. ಆದ್ದರಿಂದ ಮಹಿಳೆಯರ ಸಾಧನೆಯನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು’ ಎಂದರು. ಆಪ್ತ ಸಮಾಲೋಚಕಿ ಸುಮಂಗಲಾ ಸೋಲಾರಗೊಪ್ಪ ಪ್ರಾರ್ಥಿಸಿ ದರು. ಸಮಾಜ ಸೇವಕಿ ಪ್ರಿಯಾಂಕ ಹಿರೇಮಠ ಹಾಗೂ ಮಹಿಳಾ ಸಾಂತ್ವನದ ಸಮಾಜ ಸೇವಕಿ ಶ್ರೀದೇವಿ ಹುಡೇದ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net