

ಕೆರೂರ: ಸಮೀಪದ ಬಟಕುರ್ಕಿ ಕ್ರಾಸ್ ಬಳಿಯ ದಾಬಾದಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ವೇಳೆ ಸ್ಥಳೀಯ ಪೊಲೀಸರು ದಾಳಿ ನಡೆಸಿ ಆರೋಪಿ ಬಂಧಿಸಿದ್ದಾರೆ.
ರಾಮದುರ್ಗ ತಾಲೂಕಿನ ಉಮತಾರ ಗ್ರಾಮದ ನಿವಾಸಿ ಶಿವಾನಂದ ಹೂಲಗೇರಿ ಬಂಧಿತ ಆರೋಪಿ.
ದಾಳಿಯಲ್ಲಿ ಅಂದಾಜು 10 ಸಾವಿರ ರೂ. ಮೌಲ್ಯದ 490 ಗ್ರಾಂ. ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಡಿವೈಎಸ್‌ಪಿ ಎಸ್‌ಪಿ ವಿಶ್ವನಾಥರಾವ ಕುಲಕರ್ಣಿ, ಸಿಪಿಐ ಕರಿಯಪ್ಪ ಬನ್ನೆ ನೇತೃತ್ವದಲ್ಲಿ ಪಟ್ಟಣದ ಕ್ರೈಂ ಪಿಎಸ್‌ಐ ಎಂ. ಹಿರೇಗೌಡ್ರ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಬ್ಬಂದಿ ಎಸ್. ಬಿ. ದಳವಾಯಿ, ಅಮರೇಶ ಶಿರಹಟ್ಟಿ, ಎಚ್. ಎಚ್. ಹಿರ್ಲವರ, ಎಚ್. ಬಿ. ಗೌಡರ, ಎಚ್. ಎಂ. ಸೋಮನ್ನವರ ಇದ್ದರು.