ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ

kolara
Published on

ಕೋಲಾರ: ಅಕ್ರಮವಾಗಿ ಗಾಂಜಾ ಸಾಗಣೆ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶದ ಪುಂಗನೂರು ತಾಲೂಕಿನ ಬಾಗೇಪಲ್ಲಿ ಗ್ರಾಮದ ಶ್ರೀನಿವಾಸ ಬಂಧಿತ. ಈತನಿಂದ 1.50 ಲಕ್ಷ ರೂ. ಮೌಲ್ಯದ ಗಾಂಜಾ, ಡಿಜಿಟಲ್​ ಮಾಪನ, ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಎಸ್ಪಿ ಬಿ.ನಿಖಿಲ್​, ಎಎಸ್ಪಿಗಳಾದ ರವಿಶಂಕರ್​, ಜಗದೀಶ್​ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಎಂ.ಎಚ್​.ನಾಗ್ತೆ ನೇತೃತ್ವದಲ್ಲಿ ಕೋಲಾರ ಗ್ರಾಮಾಂತರ ಠಾಣೆ ಇನ್​ಸ್ಪೆಕ್ಟರ್​ ಕಾಂತರಾಜ್​, ಪಿಎಸ್​ಐ ಭಾರತಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ಕೋಲಾರ-& ಶ್ರೀನಿವಾರಪುರ ರಸ್ತೆಯ ಮಹರ್ಷಿ ಶಾಲೆಯ ಮುಂಭಾಗ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net