

ಕೋಟ: ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ದಿನೇಶ್ ಮೊಗವೀರ ಎಂಬಾತನನ್ನು ಬಂಧಿಸುವಲ್ಲಿ ಕೋಟ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ, ಪೊಲೀಸರಿಗೂ ಸಿಗದೆ ತಲೆಮರೆಸಿಕೊಂಡಿದ್ದನು.
ನ್ಯಾಯಾಲಯ LPC(long pending case) ಪ್ರಕರಣ ಎಂದು ವಾರಂಟ್ ಹೊರಡಿಸಿತ್ತು. ಕೋಟ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ತೇಜಸ್ವಿ ಟಿ. ಮಾರ್ಗದರ್ಶನದಲ್ಲಿ ಕೋಟ ಪೊಲೀಸ್ ಠಾಣೆ ಎಚ್.ಸಿ.ಕೃಷ್ಣ ಹಾಗೂ ಸಿಬ್ಬಂದಿ ರಾಜೇಶ್ ನಾಯ್ಕ, ಮಂಜುನಾಥ್ ಮೇಟಿ ಕಾರ್ಯಾಚರಣೆ ನಡೆಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಿರಿಯಡ್ಕದ ನ್ಯಾಯಾಲಯ ಜಿಲ್ಲಾ ಕಾರಾಗೃಹ ನೀಡಲಾಗಿದೆ.