

ಕಲಘಟಗಿ: ನಾಲ್ಕು ಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಲಘಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಬೇಗೂರ ಗ್ರಾಮದ ಧರ್ಮರಾಜ ಗಂಗಪ್ಪ ಹರಿಜನ ಬಂಧಿತ. ಮೇನಲ್ಲಿ ಮಾಚಾಪುರ ಕೃಷ್ಣ ದೇವಸ್ಥಾನ ಹತ್ತಿರ ಅರ್ಚಕರ ಬೈಕ್ ಕಳ್ಳತನ ಮಾಡಿದ್ದ ಈತನ ಬಂಧನಕ್ಕೆ ಸಿಪಿಐ ಶ್ರೀಶೈಲ ಕೌಜಲಗಿ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ವಿಚಾರಣೆ ವೇಳೆ ವಿವಿಧೆಡೆ ನಾಲ್ಕು ಬೈಕ್ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಪಿಎಸ್ಐ ಸಿ.ಎನ್. ಕರವೀರಪ್ಪನವರ, ಪಿಎಸ್ಐ ಬಸವರಾಜ ಯದ್ದಲಗುಡ್ಡ, ಸಿಬ್ಬಂದಿ ಮಹಾಂತೇಶ ನಾಡಗೌಡ, ಶ್ರೀಧರ ಗುಗ್ಗರಿ, ಗೋಪಾಲ ಪೀರಗಿ, ಮಲ್ಲಿಕಾರ್ಜುನ, ಪ್ರಭುದೇವ ಎನ್., ಹುಸೇನ ಎಲಿಗಾರ, ಮಹಾದೇವ ಹೊಸಮನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.