ಶಿರಾಳಕೊಪ್ಪದಲ್ಲಿ ಮನೆ ದೋಚಿದ್ದ ಆರೋಪಿ ಸೆರೆ

shiralkoppa crime
ಮನೆಗಳ್ಳತನ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ಮತ್ತು ಬೈಕ್‌ನ್ನು ಶಿರಾಳಕೊಪ್ಪ ಠಾಣೆ ಪೊಲೀಸರು ಜಪ್ತಿ ಮಾಡಿದರು. ಡಿವೈಎಸ್ಪಿ ಶಿವಾನಂದ ಮದರಕಂಡಿ, ಪಿಎಸ್‌ಐಗಳಾದ ಮಂಜುನಾಥ ಕುರಿ, ಪುಷ್ಪಾ ಮತ್ತು ಸಿಬ್ಬಂದಿ ಇದ್ದರು.
Published on

ಶಿವಮೊಗ್ಗ: ಶಿರಾಳಕೊಪ್ಪದ ಭೋವಿ ಕಾಲನಿಯಲ್ಲಿ ಮನೆಗೆ ನುಗ್ಗಿ 6.81 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು 7.16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೈಕ್ ಜಪ್ತಿ ಮಾಡಿದ್ದಾರೆ.

ಹುಬ್ಬಳ್ಳಿ ಜನ್ನತ್ ನಗರದ ಹಾಲಿ ಗೋವಾದ ವಾಸ್ಕೋ ನಿವಾಸಿ ಖಾಜಾ ಹಾವೇರಿ ಅಲಿಯಾಸ್ ಖಾಜಾ (24) ಬಂಧಿತ ಆರೋಪಿ. 2023ರ ಡಿ.28ರಂದು ಶಿರಾಳಕೊಪ್ಪ ಭೋವಿ ಕಾಲನಿಯ ಪ್ರಭಾಕರ್ ಶಿಲ್ಪಿ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾರ್ಗದರ್ಶನ, ಶಿಕಾರಿಪುರ ಡಿವೈಎಸ್ಪಿ ಶಿವಾನಂದ ಮದರಖಂಡಿ ಮತ್ತು ಶಿಕಾರಿಪುರ ವೃತ್ತ ನಿರೀಕ್ಷಕ ರುದ್ರೇಶ್ ಮೇಲ್ವಿಚಾರಣೆಯಲ್ಲಿ ಶಿರಾಳಕೊಪ್ಪ ಠಾಣೆಯ ಪಿಎಸ್‌ಐ ಮಂಜುನಾಥ ಕುರಿ ನೇತೃತ್ವದಲ್ಲಿ ಪಿಎಸ್‌ಐಗಳಾದ ಪುಷ್ಪಾ, ಶಿವಮೊಗ್ಗ ಬೆರಳಚ್ಚು ಮುದ್ರಾ ಘಟಕದ ಕೆಂಚಪ್ಪ, ಎಎಸ್‌ಐ ರಮೇಶ್ ನಾಯ್ಕ, ಸಿಬ್ಬಂದಿ ಸಂತೋಷ, ಮಹಾದೇವ್, ಸಲ್ಮಾನ್, ಕಾರ್ತಿಕ್, ಅಶೋಕ, ನಾಗರಾಜ್, ಎಸ್ಪಿ ಕಚೇರಿಯ ತಾಂತ್ರಿಕ ವಿಭಾಗದ ಇಂದ್ರೇಶ್, ಗುರುರಾಜ್, ವಿಜಯ್, ತ್ಯಾಗರಾಜ್ ಮತ್ತು ಕಿರಣ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಬಳಿಕ ವಿಚಾರಣೆ ನಡೆಸಿದಾಗ ಶಿರಾಳಕೊಪ್ಪದಲ್ಲಿ 6.81 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಮತ್ತು ಹಾನಗಲ್‌ನಲ್ಲಿ ಬೈಕ್ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ 6,81,200 ರೂ. ಮೌಲ್ಯದ 111.85 ಗ್ರಾಂ ಬಂಗಾರದ ಆಭರಣ ಮತ್ತು 326 ಗ್ರಾಂ ಬೆಳ್ಳಿ ಆಭರಣ ಹಾಗೂ 35 ಸಾವಿರ ರೂ. ಮೌಲ್ಯದ ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net