ಹತ್ತು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಖದೀಮ ಅಂದರ್‌

accused arrested
Published on

ಕಾರವಾರ: ಹತ್ತು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಗಾಂಜಾ ಪ್ರಕರಣದ ಆರೋಪಿಯನ್ನು ಶಹರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸದಾಶಿವಗಡ ನಿವಾಸಿ ಪ್ರಶಾಂತ ಸದಾಶಿವ ನಾಯರ್ ಬಂಧಿತ. 2013 ರಲ್ಲಿ ಕಾರವಾರ ಶಹರ ಠಾಣೆಯಲ್ಲಿ ದಾಖಲಾದ ಅಕ್ರಮ ಗಾಂಜಾ ಮಾರಾಟ ಪ್ರಕರಣದಲ್ಲಿ ಆತ ಆರೋಪಿಯಾಗಿದ್ದ. ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದ್ದರೂ ಆತ ನಾಪತ್ತೆಯಾಗಿದ್ದ.

ಡಿವೈಎಸ್‌ಪಿ ವ್ಯಾಲೆಂಟೇನ್‌ ಡಿಸೋಜಾ, ಸಿಪಿಐ ರಮೇಶ ಹೂಗಾರ ಅವರ ಮಾರ್ಗದರ್ಶನದಲ್ಲಿ ಶಹರ ಠಾಣೆ ಪಿಎಸ್‌ಐ ವಿಶ್ವನಾಥ ನಿಂಗೊಳ್ಳಿ ನೇತೃತ್ವದಲ್ಲಿ ಸಿಬ್ಬಂದಿ ಸೂರಜ್ ಕೊಠಾರಕರ್, ರಾಜೇಶ ನಾಯಕ, ಗಿರೀಶಯ್ಯ, ವಿಕಾಸ ನಾಂದ್ರೆ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net