33 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

kdb_13 jan_Hariprasad
Published on

ಕಡಬ: ಪ್ರಕರಣವೊಂದಕ್ಕೆ ಸಂಬಂಧಿಸಿ 33 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಕಡಬ ಪೊಲೀಸರು ಮೈಸೂರಿನಲ್ಲಿ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಡಬ ತಾಲೂಕಿನ ಆಲಂಕಾರು ಗ್ರಾಮದ ಕಕ್ವೆ ನಿವಾಸಿ ದೇವಪ್ಪ ಗೌಡರ ಪುತ್ರ ಹರಿಪ್ರಸಾದ್ ಬಂಧನಕ್ಕೊಳಗಾದ ಆರೋಪಿ. ಕಡಬ ಠಾಣೆಯಲ್ಲಿ ಆತನ ವಿರುದ್ದ 341, 326, 506 ಜತೆಗೆ ಐ34 ಐಪಿಸಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪುತ್ತೂರು ವೃತ್ತ ನಿರೀಕ್ಷಕ ರವಿ ಬಿ.ಎಸ್ ಮತ್ತು ಕಡಬ ಠಾಣಾ ಎಸ್‌ಐ ಆಂಜನೇಯ ರೆಡ್ಡಿ ನಿರ್ದೇಶನದಂತೆ ಕಡಬ ಠಾಣಾ ಎಚ್‌ಸಿ ರಾಜು ನಾಯಕ್ ಮತ್ತು ಸಿರಾಜುದ್ದೀನ್ ಮೈಸೂರಿನಲ್ಲಿ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಜ.21ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net