

ಪಡುಬಿದ್ರಿ: ಕಾಪು ಪೊಲೀಸ್ ಠಾಣಾ 2019 ಪ್ರಕರಣದ 2ನೇ ಆರೋಪಿತನಾಗಿದ್ದು, ಉಡುಪಿ ಜಿಲ್ಲಾ 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಷರತ್ತು ಬದ್ಧ ಜಾಮೀನಿನಲ್ಲಿದ್ದು ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಅಶ್ಮತ್ ಆಲಿ (35) ಎಂಬಾತನನ್ನು ಕಾಪು ಪೊಲೀಸರು ಕೇರಳ ಕಣ್ಣೂರು ಮಟ್ಟನೂರ್ ಏರ್‌ಪೋರ್ಟ್‌ನಲ್ಲಿ ಮಂಗಳವಾರ ಬಂಧಿಸಿದ್ದಾರೆ.
ಆರೋಪಿ 2019 ಸೆಪ್ಟೆಂಬರ್ 6ರಂದು ಷರತ್ತುಬದ್ಧ ಜಾಮೀನು ಪಡೆದು, ಪ್ರಕರಣದ ವಿಚಾರಣಾ ಸಮಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ನ್ಯಾಯಾಲಯ ಆರೋಪಿತನ ವಿರುದ್ಧ ಒಟ್ಟು 18 ಬಾರಿ ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ತಲೆಮರೆಸಿಕೊಂಡಿದ್ದ ಕಾರಣ ಆತನ ದಸ್ತಗಿರಿಗೆ ಅನಾನುಕೂಲವಾಗಿದ್ದು, ಹೊರದೇಶಕ್ಕೆ ಹೋಗಿರಬಹುದಾಗಿ ಸಂಶಯ ಇದ್ದುದರಿಂದ ಆತನ ವಿರುದ್ಧ ಎಲ್‌ಒಸಿ ತೆರೆಸಲಾಗಿತ್ತು. ಅದರಂತೆ ಅ.21ರಂದು ರಾತ್ರಿ ಅಶ್ಮತ್ ಆಲಿ ಕೇರಳ ಕಣ್ಣೂರು ಮಟ್ಟನೂರ್ ಏರ್‌ಪೋರ್ಟ್‌ಗೆ ಬಂದಿಳಿದ ಮಾಹಿತಿಯಂತೆ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.