

ವಿಜಯವಾಣಿ ಸುದ್ದಿಜಾಲ ಕುಶಾಲನಗರ
ಕಾಡಾನೆಗಳ ಹಿಂಡು ದಾಳಿ ನಡೆಸಿದ ಮರೂರು ಗ್ರಾಮದ ಪ್ರಗತಿಪರ ರೈತ ಎಚ್.ಎಸ್.ಮಹೇಶ್ ಎಂಬವರಿಗೆ ಸೇರಿದ 4 ಎಕರೆ ವಿಸ್ತೀರ್ಣದಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಅಡಕೆ ಬೆಳೆ ಸಂಪೂರ್ಣ ನಾಶವಾಗಿದೆ.
ಗುರುವಾರ ರಾತ್ರಿ ಗ್ರಾಮಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಹಸಿವು ನೀಗಿಸಿಕೊಳ್ಳಲು ಅಡಕೆ ತೋಟಕ್ಕೆ ದಾಳಿಯಿಟ್ಟು ಎಳೆಯ ಅಡಕೆ ಗಿಡಗಳನ್ನು ತಿಂದು ತುಳಿದು ನೆಲಸಮ ಮಾಡಿವೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ರೈತ ಮಹೇಶ್ ದೂರಿದ್ದಾರೆ.
ಅರಣ್ಯ ಇಲಾಖಾಧಿಕಾರಿಗಳು ಕಾಡಂಚಿನಲ್ಲಿ ಶಾಶ್ವತವಾದ ಸೋಲಾರ ಬೇಲಿ ಅಳವಡಿಸಿ ಅರಣ್ಯದೊಳಗೆ ಕಾಡಾನೆಗೆ ಬೇಕಾದ ಆಹಾರ ಲಭ್ಯವಾಗುವಂತೆ ಮಾಡಿದಲ್ಲಿ ಗ್ರಾಮಕ್ಕೆ ದಾಳಿ ಇಡುವುದು ತಪ್ಪುತ್ತದೆ. ಕಾಡಾನೆಗಳಿಂದ ಉಂಟಾಗಿರುವ ನಷ್ಟ ಭರಿಸಬೇಕೆಂದು ಮಹೇಶ್ ಒತ್ತಾಯಿಸಿದ್ದಾರೆ.
(ಚಿತ್ರ: 10ಎಂಡಿಕೆಜೆ19-
ಮರೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಎಚ್.ಎಸ್. ಮಹೇಶ್ ಅವರ ತೋಟದಲ್ಲಿನ ಅಡಕೆ ಗಿಡ ಹಾನಿಗೀಡಾ ಗಿರುವುದು.